(ನ್ಯೂಸ್ ಕಡಬ) newskadaba.com ಕಡಬ, ಆ.09. ಸುಳ್ಯ: ಬಸ್ ಚಲಾಯಿಸುತ್ತಿರುವಾಗಲೇ ಬಸ್ ಚಾಕನಿಗೆ ಪಾಶ್ರ್ವವಾಯು ಕಾಣಿಸಿಕೊಂಡಾಗ ಕೊಡಲೇ ಸಮಯ ಪ್ರಜ್ಞೆ ಮೆರೆದ ಚಾಲಕ ಮತ್ತು ನಿರ್ವಾಕನಿಂದ 16 ಮಂದಿ ಪ್ರಯಾಣಿಕರ ಪ್ರಾಣ ರಕ್ಷಣೆಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಆ.8ರಂದು ಬೆಳಗ್ಗೆ ಪುತ್ತೂರು ಡಿಪೋದಿಂದ ಹೊರಟು ಮೈಸೂರಿಗೆ ಹೋದ ಸರ್ಕಾರಿ ಬಸ್ ಸಂಜೆ ಅಲ್ಲಿಂದ ಪುತ್ತೂರಿಗೆ ಹಿಂತಿರುವಾಗ ಸಂಜೆ ಜೋಡುಪಾಲ ಬಳಿ ಬಸ್ ಅತ್ತ ಇತ್ತ ವಾಲಾಡುತ್ತ ಸಾಗ ತೊಡಗಿದೆ ಬಸ್ ನಿರ್ವಾಹಕರಿಗೆ ಸಂಶಯ ಬಂದು ಚಾಲಕನ ಬಳಿ ಬಂದು ವಿಚಾರಿಸಿದಾಗ ಚಾಲಕನಿಗೆ ಏನಾಗುತ್ತಿದೆ ಎಂದು ಹೇಳಲು ಸಾಧ್ಯವಾಗದೆ ಚಡಪಡಿಸಿದರೂ ಕೊಡಲೇ ಎಚ್ಚೆತ್ತುಕೊಂಡ ನಿರ್ವಾಹಕ ಬಸ್ಸನ್ನು ಬದಿಗೆ ಸರಿಸಿ ಬ್ರೇಕ್ ಹಾಕಲು ತಿಳಿಸಿದ್ದಾರೆ. ಚಾಲಕನ ಕೈಕಾಲು ಸ್ವಾಧೀನ ತಪ್ಪಿದಂತಿದ್ದರಿಂದ ಕಷ್ಟಪಟ್ಟು ಬ್ರೇಕ್ ಹಾಕಿ ನಿಲ್ಲಿಸಿದರು. ನಂತರ ಚಾಲನನ್ನು ಉಪಚರಿಸಿದಾಗ ಪಾಶ್ರ್ವವಾಯು ಸಂಭವಿಸಿರುವುದು ಗೊತ್ತಾಗುತ್ತದೆ. ನಿರ್ವಾಹಕ ಚಾಲಕನನ್ನು ಬದಿಗೆ ಕೂರಿಸಿ ಬಸ್ ಚಲಾಯಿಸಿಕೊಂಡು ಸುಳ್ಯ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಬಸ್‍ನಲ್ಲಿ 16 ಮಂದಿ ಪ್ರಯಾಣಿಕರಿದ್ದರೆಂದು ತಿಳಿದುಬಂದಿದೆ. ಬಸ್ ಚಾಲಕನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.