ಪುತ್ತೂರು :ಬೃಹತ್ ಕಾಂಪೌಂಡ್ ಗೋಡೆ ಕುಸಿತ➤ ಜಿಲ್ಲೆಯ ಅತೀ ದೊಡ್ಡ ಗೋಶಾಲೆಗೆ ಹಾನಿ…!!!

(ನ್ಯೂಸ್ ಕಡಬ) newskadaba.com ಪುತ್ತೂರು: ಆ.09,. ನಿರಂತರವಾಗಿ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಅಲ್ಲಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುರಿದ ಭಾರೀ ಮಳೆಗೆ ಬೃಹತ್ ತಡೆಗೊಡೆಯೊಂದು ಕುಸಿದು ಬಿದ್ದಿದೆ.

ಪುತ್ತೂರಿನ ನರಿಮೊಗರುವಿನಲ್ಲಿರುವ ಪ್ರತಿಷ್ಠಿತ ಸಾಂದಿಪನಿ ವಿದ್ಯಾಸಂಸ್ಥೆಯ ಸಂಚಾಲಕರಾದ, ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ನಿವಾಸಿ ಹಿಂದಾರ್ ಭಾಸ್ಕರ ಆಚಾರ್ ಮನೆಯ ಹಿಂಬದಿಯ ಬೃಹತ್ ಕಾಂಕ್ರೀಟ್ ಕಾಂಪೌಂಡ್ ಗೋಡೆ ಶನಿವಾರ ಸಂಜೆ ಕುಸಿದು ಬಿದ್ದಿದೆ. ಕಾಂಪೌಂಡ್ ಕುಸಿತದಿಂದ ಭಾಸ್ಕರ್ ಆಚಾರ್ಯರವರ ವಾಸದ ಮನೆ ಹಾಗೂ ಗೋಶಾಲೆಗೆ ಹಾನಿಯಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಅತೀ ದೊಡ್ಡ ಗೋಶಾಲೆ ಎಂಬ ಖ್ಯಾತಿಗಳಿಸಿದ ದನದ ಕೊಟ್ಟಿಗೆ ಹಾನಿಯಾಗಿದ್ದು, ನಾಲ್ಕು ಮಹಡಿಯನ್ನು ಒಳಗೊಂಡಿರುವ ವಿಶಾಲ ಗೋಶಾಲೆಯಲ್ಲಿ ನೂರಕ್ಕೂ ಮಿಕ್ಕಿ ಗೋವುಗಳನ್ನು ಸಾಕಲಾಗುತ್ತಿದೆ. ಈ ದುರ್ಘಟನೆಯಿಂದ ಕಟ್ಟಡಕ್ಕೆ ದೊಡ್ಡ ಹಾನಿ ಉಂಟಾಗಿದ್ದು, ಎಲ್ಲಾ ಗೋವುಗಳು ಯಾವುದೇ ಗಾಯಗಳು ಇಲ್ಲದೇ ಪಾರಾಗಿದೆ.

Also Read  ಉಳ್ಳಾಲ: ದರ್ಗಾ ವಿಹಾರಕ್ಕೆ ಬಂದ ವ್ಯಕ್ತಿ ಸಮುದ್ರಪಾಲು

 

ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕೌಂಪೌಂಡ್ ಇದೀಗ ಸಂಪೂರ್ಣ ದ್ವಂಸವಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!