ಕಡಬ ತಾಲೂಕಿನಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಚಿರತೆ ನಾಯಿಗಳ ಮೇಲೆ ದಾಳಿ

(ನ್ಯೂಸ್ ಕಡಬ) newskadaba.com ಕಡಬ, ಆ.09:  ಕಡಬ ತಾಲೂಕಿನಲ್ಲಿ ಆಗಾಗ ಕಾಣಸಿಗುತ್ತಿರು ಚಿರತೆ ಕಾಡುಬಿಟ್ಟು ನಾಡಿನತ್ತ ಮುಖಮಾಡಿದಂತಿದೆ. ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ,ಗುರಿಯಡ್ಕ ಪ್ರದೇಶದಲ್ಲಿ ಹಾಗೂ ಪಾಲ್ತಾಡಿ ಗ್ರಾಮದ ಬಂಬಿಲ ಪ್ರದೇಶದಲ್ಲಿ ಶುಕ್ರವಾರ ಸ್ಥಳೀಯರಾದ ಅರುಣ್ ಗೌಡ ಬಂಬಿಲ ಅವರ ತೋಟದಲ್ಲಿ  ಪ್ರತ್ಯಕ್ಷವಾಗಿದೆ. ಇದರಿಂದ ಸ್ಥಳೀಯ ಜನರಲ್ಲಿ ಮತ್ತೆ ಆತಂಕ ಎದುರಾಗಿದೆ.

ಕುಮಾರಮಂಗಲದ ರಮೇಶ್ ಆಚಾರ್ಯ ಅವರ ಸಾಕುನಾಯಿಯ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಬಳಿಕ ಬಂಬಿಲ ಜಾರಿಗೆತ್ತಡಿ ಸೋಮಪ್ಪ ಗೌಡ ಅವರ ನಾಯಿಯ ಮೇಲೂ ದಾಳಿ ಮಾಡಿ ಗಂಭೀರ  ಗಾಯವಾಗಿದೆ. ಈ ಚಿರತೆ ಶುಕ್ರವಾರ ರಾತ್ರಿ ಪಂಚೋಡಿ ಭಾಗದಲ್ಲಿ ರಾತ್ರಿ ಸಂಚರಿಸಿದ್ದನ್ನೂ ಸ್ಥಳೀಯರು ನೋಡಿ  ಭಯ ಬೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿದರೆ ಮಾತ್ರ ಜನರ ಭಯ ದೂರವಾಗುವಂತಿದೆ.

Also Read  ಕರ್ನಾಟಕದ ಹಂಪಿ ಮತ್ತು ಜಾರ್ಖಂಡ್‌ನಲ್ಲಿ ಭೂಕಂಪ

error: Content is protected !!
Scroll to Top