ತಲಕಾವೇರಿ ದುರಂತ ➤ ಪ್ರಧಾನ ಅರ್ಚಕರ ಅಣ್ಣ ‘ಆನಂದ ತೀರ್ಥ ಸ್ವಾಮಿ’ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಡಿಕೇರಿ, ಆ.08:  ಕಳೆದ ನಾಲ್ಕು ದಿನಗಳ ಹಿಂದೆ ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರು ಕಣ್ಮರೆಯಾಗಿದ್ದರು. ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಂತ ರಕ್ಷಣಾ ಸಿಬ್ಬಂದಿಗಳಿಗೆ ಇದೀಗ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಅಣ್ಣ ಆನಂದ ತೀರ್ಥ ಸ್ವಾಮಿ(86) ಅವರ ಮೃತದೇಹ ಎಂದು ಹೇಳಲಾಗುತ್ತಿರುವ ಮೃತದೇಹ ಪತ್ತೆಯಾಗಿದೆ.

 

 

 

ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ತಲಕಾವೇರಿಯ ಪ್ರಧಾನ ಅರ್ಚಕ ಸೇರಿದಂತೆ ಐವರು ಕಣ್ಮರೆಯಾಗಿದ್ರು. ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ಇಂದು ರಕ್ಷಣಾ ಕಾರ್ಯಾಚರಣೆಗೆ ಚುರುಕು ಮುಚ್ಚಿಸಲಾಗಿತ್ತು. ಇಂತಹ ರಕ್ಷಣಾ ಕಾರ್ಯಾಚರಣೆಯಲ್ಲಿ ಈಗ ಅರ್ಚಕ ನಾರಾಯಣ ಆಚಾರ್ ಅವರ ಅಣ್ಣ ಆನಂದ ತೀರ್ಥ ಸ್ವಾಮಿ(86) ಅವರ ಮೃತದೇಹ ಪತ್ತೆಯಾಗಿದೆ. ಇನ್ನೂ ಮಳೆಯ ಅಬ್ಬರದ ನಡುವೆಯೂ ಇನ್ನುಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಆದ್ರೇ ಎಡೆಬಿಡದೇ ಸುರಿಯುತ್ತಿರುವಂತ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಆಗಾಗ ತಡೆ ಉಂಟಾಗುತ್ತಿದೆ.

 

error: Content is protected !!

Join the Group

Join WhatsApp Group