ಆಲೆಟ್ಟಿ: ಮದ್ಯರಾತ್ರಿ ಮನೆ ಹಿಂಬದಿಯ ಬರೆ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ದಂಪತಿ

(ನ್ಯೂಸ್ ಕಡಬ) newskadaba.com ಆಲೆಟ್ಟಿ, ಆ.08:  ಈಗಾಗಲೇ, ಕರಾವಳಿ ಗ್ರಾಮೀಣ ಭಾಗಗಳು ಮಳೆಯ ಅಬ್ಬರಕ್ಕೆ ನಲುಗುತ್ತಿದೆ. ಅಲ್ಲಲ್ಲಿ ಗುಡ್ಡ ಕುಸಿತಗೊಳ್ಳುತ್ತಿದೆ.  ಆಲೆಟ್ಟಿ ಗ್ರಾಮದ ಗುಂಡ್ಯ ನಿವಾಸಿ ಮೊರಂಗಲ್ಲು ಶಿವರಾಮ ರೈ ಯವರ ಮನೆ ಹಿಂಬದಿ ಭಾರಿ ಪ್ರಮಾಣದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಗುಡ್ಡ ಕುಸಿತಗೊಂಡು ಅಪಾರ ಪ್ರಮಾಣದ ನಷ್ಟವಾಗಿದೆ.

 

ತಡರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಾಯಿ ಜೋರಾಗಿ ಬೊಗಳಿದಾಗ ಮನೆಯ ಒಳಗೆ ಮಲಗಿ ನಿದ್ರಿಸಿದ್ದ ಶಿವರಾಮ ರೈ ದಂಪತಿ ಯವರು  ಎಚ್ಚರಗೊಂಡು ಹೊರಗೆ ಬಂದು ನೋಡುವಷ್ಟರಲ್ಲಿ,  ಬರೆ ಕುಸಿತಗೊಂಡಿದೆ, ಪರಿಣಾಮ ಅವರಿದ್ದ ಬೆಡ್ ರೂಂ ವರೆಗೆ ಮಣ್ಣು ಜರಿದು ನಿಂತಿತ್ತು. ಅದೃಷ್ಟವಶಾತ್ ಶಿವರಾಮ ರೈ ದಂಪತಿಯವರು ಅಪಾಯದಿಂದ ಪಾರಾಗಿದ್ಧಾರೆ. ಮನೆಯ ಹಿಂಬದಿ ಸಂಪೂರ್ಣವಾಗಿ ಹಾನಿಗೊಂಡಿದೆ. ಮನೆ ಹಿಂದುಗಡೆ ಬದಿ ಸಂಪೂರ್ಣ ಹಾನಿಯಾಗಿದ್ದು, ಶೇಡ್ ನಲ್ಲಿ ನಿಲ್ಲಿಸಿದ್ದ ಕಾರಿಗೆ ಸ್ವಲ್ಪ ಹಾನಿಯಾಗಿದೆ.

Also Read  ಮರ್ಧಾಳ ಜೀವನ್ ಜ್ಯೋತಿ ವಿಶೇಷ ಶಾಲೆಯಲ್ಲಿ ಉಚಿತ ಹೋಮಿಯೋಪತಿ, ಫಿಸಿಯೋಥೆರಪಿ, ಸ್ಪೀಚ್ ಥೆರಪಿ ಆರೋಗ್ಯ ಶಿಬಿರ

 

 

error: Content is protected !!
Scroll to Top