ಮಂಗಳೂರು |ಮಳೆಗೆ ನಲುಗಿದ ಕರಾವಳಿ ಭಾಗ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.08:  ದ.ಕ. ಜಿಲ್ಲೆಯ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕು ಸಹಿತ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಭಾರಿ ಗಾಳಿ ಮಳೆ ಮುಂದುವರಿದಿದ್ದು, ನೆರೆ-ಪ್ರವಾಹ, ಗುಡ್ಡ ಕುಸಿತ, ಮನೆಗಳಿಗೆ ಹಾನಿ ಮೊದಲಾದವುಗಳಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

 

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಸ್ನಾನಘಟ್ಟ ಐದನೇ ದಿನವೂ ಮುಳುಗಡೆಯಾಗಿದೆ. ಇಲ್ಲಿನ ಶೌಚಗೃಹ, ದೇವರ ಅವಭೃತ ಕಟ್ಟೆ ಭಾಗಶಃ ಮುಳುಗಡೆಗೊಂಡಿದೆ. ಡ್ರೆಸ್ಸಿಂಗ್ ರೂಂ, ಲಗೇಜ್ ಕೊಠಡಿ, ರಕ್ಷಕರ ಕೊಠಡಿ ಒಳಗೊಂಡ ಕಟ್ಟಡ ಜಲಾವೃತಗೊಂಡಿದೆ. ಹಳೇ ಸೇತುವೆಯೂ ಮುಳುಗಡೆಯಾಗಿದೆ. ದರ್ಪಣತೀರ್ಥ ನದಿಯ ಆಸುಪಾಸು ಕೃಷಿ ತೋಟಗಳಿಗೆ ನೀರು ನುಗ್ಗಿದೆ. ಕಡಬದಲ್ಲಿ ಹೊಸ್ಮಠ ಮುಳುಗು ಸೇತುವೆ ಆಗಾಗ ಮುಳುಗಡೆಯಾಗುತ್ತಿದೆ. ಈ ಭಾಗದಲ್ಲೂ ತೋಟಗಳು ಜಲಾವೃತಗೊಂಡಿವೆ.
ಶನಿವಾರದಿಂದ ಮಳೆಯ ಅಬ್ಬರ ಕಡಿಮೆಯಾಗುವ ಸಾಧ್ಯತೆಯಿದ್ದು, ಆ.11ರವರೆಗೆ ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಜಿಲ್ಲೆಯ ಇತರ ಕಡೆಗಳಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದ್ದು, ದಿನದ ಬಹುಭಾಗ ಮೋಡ ಕವಿದ ವಾತಾವರಣವಿತ್ತು. ಇತ್ತ ಕಡಲ್ಕೊರೆತ ತೀವ್ರಗೊಂಡಿದ್ದು, ಸೋಮೇಶ್ವರ, ಉಚ್ಚಿಲ, ಪಣಂಬೂರು, ತಣ್ಣೀರುಬಾವಿ ಪ್ರದೇಶದಲ್ಲಿ ಹಾನಿಯಾಗಿದೆ.

Also Read  ನ.20ರವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆ

 

error: Content is protected !!
Scroll to Top