ಬಂಟ್ವಾಳ : ಟ್ರಾಫಿಕ್ ಕಂಟ್ರೋಲ್ ಪೋಲೀಸ ರಿಂದ ಹೆದ್ದಾರಿ ರಸ್ತೆ ದುರಸ್ತಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.08: ಲಾಠಿ ಹಿಡಿದು ಟ್ರಾಫಿಕ್ ಕಂಟ್ರೋಲ್ ಮಾಡುವ ಪೋಲೀಸರು ಹಾರೆ, ಬುಟ್ಟಿ ಹಿಡಿದು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಯಿತು. ಇದು ಸಾಧ್ಯವಾಗಿದ್ದು ಬಿ.ಸಿ.ರೋಡಿನ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಮಾಡಿದ ಮಾದರಿ ಕಾರ್ಯದಿಂದಾಗಿ.

ಭಾರೀ ಮಳೆಗೆ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳೆದ್ದು ವಾಹನ ಸವಾರರಿಗೆ ಭಾರೀ ಸಂಕಷ್ಟ ಎದುರಾಗಿತ್ತು.
ಇದನ್ನೆಲ್ಲಾ ಕಂಡು ಸಂಚಾರ ನಿಯಂತ್ರಣ ಕರ್ತವ್ಯವನ್ನು ಮಾಡುವ ಪೊಲೀಸರೇ ಸ್ವತಃ ಹಾರೆ, ಬುಟ್ಟಿ ಹಿಡಿದು ಹೊಂಡಗಳನ್ನು ಮುಚ್ಚವ ಕೆಲಸಕ್ಕೆ ಕೈ ಹಾಕಿದರು. ಈ ಮೂಲಕ ಹೆದ್ದಾರಿ ಇಲಾಖೆ ಮಾಡಬೇಕಾದ ಕಾರ್ಯವನ್ನು ಟ್ರಾಫಿಕ್ ಪೋಲೀಸರು ಮಾಡಿದ್ದು ಸಾರ್ವಜನಿಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

Also Read  ಪುತ್ತೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ..!

error: Content is protected !!
Scroll to Top