ಕಲ್ಲುಗುಡ್ಡೆ: ಬುಡ ಸಮೇತ ಉರುಳಿ ಬಿದ್ದ ಹಲಸಿನ ಮರ ➤ ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆ.8., ಭಾರೀ ಗಾಳಿ, ಮಳೆಗೆ ಹಲಸಿನ ಮರವೊಂದು ಉರುಳಿಬಿದ್ದು, ಮನೆ ಹಾಗೂ ವಿದ್ಯುತ್ ಲೈನ್‍ಗೆ ಹಾನಿಯುಂಟಾದ ಘಟನೆ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.

ಕಲ್ಲುಗುಡ್ಡೆ ಕಾಂತಪ್ಪ ಅಜಿಲ ಎಂಬವರ ಮನೆ ಬಳಿಯ ಹಲಸಿನ ಮರ ಬುಡ ಸಮೇತ ಉರುಳಿ ಬಿದ್ದಿದ್ದು, ಮನೆಯ ಒಂದು ಭಾಗಕ್ಕೆ ಹಾನಿಯಾಗಿ, ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದೆ ಇದರಿಂದ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯಗೊಂಡಿತ್ತು. ಸ್ಥಳಕ್ಕೆ ಕಂದಾಯ ಇಲಾಖೆಯವರು ಬಂದು ಪರಿಶೀಲನೆ ನಡೆಸಿದ್ದಾರೆ.

error: Content is protected !!

Join the Group

Join WhatsApp Group