ಆಗಸ್ಟ್‌ ೧೦ಕ್ಕೆ ಎಸ್ಎಸ್ಎಲ್‌ ಸಿ ಫಲಿತಾಂಶ ಪ್ರಕಟ➤ ಶಿಕ್ಷಣ ಸಚಿವರ ಅಧಿಕೃತ ಹೇಳಿಕೆ

(ನ್ಯೂಸ್ ಕಡಬ) newskadaba.com.ಬೆಂಗಳೂರು,ಆ.7:  ಕೊರೊನಾದ ಮಧ್ಯೆ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿರು ವಿದ್ಯಾರ್ಥಿಗಳಿಗೆ ಸರಕಾರ ಕೊನೆಗೂ ಫಲಿತಾಂಶದ ಸ್ಪಷ್ಟ ದಿನಾಂಕ ತಿಳಿಸಿದೆ.

ಆಗಸ್ಟ್ 10 ಸೋಮವಾರ ಮಧ್ಯಾಹ್ನ 3 ಗಂಟೆಗೆ ಎಸ್ಎಸ್ಎಲ್‌ ಸಿ ಪಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಪರವಿರೋಧ ಚರ್ಚೆಯ ನಡುವೆಯೇ ಜೂನ್ 25ರಿಂದ ಜುಲೈ 4ರವರೆಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ರಾಜ್ಯದಲ್ಲಿ ಎಸ್ಎಸ್ಎಲ್‌ ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಮೌಲ್ಯಮಾಪನ ಹಾಗೂ ಇತರೆ ಪ್ರಕ್ರಿಯೆಯು ಮುಗಿದಿರುವುದರಿಂದ ಆಗಸ್ಟ್ 10 ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು.
ಎಂದು ಸಚಿವ ಸುರೇಶ್ ಕುಮಾರ್ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಹೇಳಿದ್ದಾರೆ‌.

Also Read  ಬೈಕ್ ಸ್ಕಿಡ್ – ಸವಾರ ಮೃತ್ಯು, ಸಹಸವಾರ ಗಂಭೀರ

error: Content is protected !!
Scroll to Top