ವೆನ್ಲಾಕ್ – ಶುಶ್ರೂಷಕರು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳಿಗೆ ನೇರ ನೇಮಕಾತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.07:  ಕೊವೀಡ್-19 ಹಿನ್ನೆಲೆಯಲ್ಲಿ ವೆನ್ಲಾಕ್‍ ಜಿಲ್ಲಾ ಆಸ್ಪತ್ರೆ ಮಂಗಳೂರು, ಇಲ್ಲಿ ಖಾಲಿ ಇರುವ ಶುಶ್ರೂಷಕರು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು ಹುದ್ದೆಗಳ ವಿವಿರ ಇಂತಿವೆ:

 

 

ಶುಶ್ರೂಷಕರು-16 ಹುದ್ದೆಗಳು, ವಿದ್ಯಾರ್ಹತೆ-ಡಿಪ್ಲೋಮಾಇನ್ ನರ್ಸಿಂಗ್ (ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಣಿಯಾಗಿರಬೇಕು), ವೇತನರೂ 25,000.ಫಾರ್ಮಾಸಿಸ್ಟ್-3 ಹುದ್ದೆಗಳು ವಿದ್ಯಾರ್ಹತೆ– ಡಿ-ಫಾರ್ಮಾ (ಫಾರ್ಮಾಸಿ ಕೌನ್ಸಿಲ್‍ನಲ್ಲಿ ನೋಂದಣಿಯಾಗಿರಬೇಕು) ವೇತನ-20,000. ಹುದ್ದೆಗಳಿಗೆ 6 ತಿಂಗಳು ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಗುತ್ತಿಗೆಆಧಾರದ ಮೇಲೆ ಮೆರಿಟ್‍ ಆಧಾರದಲ್ಲಿ ನೇರ ಸಂದರ್ಶನದ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಗಸ್ಟ್ 10ರಂದು ಬೆಳಿಗ್ಗೆ 11 ಗಂಟೆಗೆದ.ಕಜಿಲ್ಲಾ ಪಂಚಾಯತ್, ನೇತ್ರಾವತಿ ಸಭಾಂಗಣದಲ್ಲಿ ನೇರ ಸಂದರ್ಶನ ನಡೆಯಲಿದೆ.ಸದ್ರಿ ದಿನಾಂಕ ದಂದು ಅಭ್ಯರ್ಥಿಗಳು ವಿದ್ಯಾರ್ಹತೆ ಮೂಲ ಪ್ರಮಾಣ ಪತ್ರ ಹಾಗೂ ಅದರ ಸ್ವಯಂದೃಢೀಕೃತ ನಕಲು ಪ್ರತಿ, ಅನುಭವ ಹೊಂದಿದ್ದಲ್ಲಿ ಅನುಭವ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರವನ್ನೊಳಗೊಂಡ ನಿಗದಿತ ಅರ್ಜಿಯೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ, ವೆನ್ಲಾಕ್‍ ಜಿಲ್ಲಾ ಆಸ್ಪತ್ರೆ, ಹಂಪನಕಟ್ಟಾ, ಮಂಗಳೂರು, ದೂರವಾಣಿ ಸಂಖ್ಯೆ 0824 2413205, 0824 2421351, 0824 2425137 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ. (ಕರ್ನಾಟಕ ವಾರ್ತೆ)

Also Read  ಹೆಲ್ಮೆಟ್​ ಧರಿಸದೆ ಮಹಿಳಾ ಪಿಎಸ್​ಐ ಸಂಚಾರ..! ➤ ಪ್ರಕರಣ ದಾಖಲು

 

error: Content is protected !!
Scroll to Top