ಬೆಳ್ತಂಗಡಿ ತಾ. ವ್ಯಾಪ್ತಿಯ ಹಾನಿಗೊಳಾಗದ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.07:  ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಎಲ್ಲಾ ತಾಲೂಕುಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಗುರುವಾರ ಬೆಳ್ತಂಗಡಿ ತಾಲೂಕಿನ ಕುಕ್ಕಾವು ಹಾಗೂ ಕಾಜೂರು ಪ್ರದೇಶಗಳಿಗೆ  ಬೆಳ್ತಂಗಡಿ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಶಿವಪ್ರಸಾದ್ ಅವರು ಭೇಟಿ ನೀಡಿದ್ದು,  ರಸ್ತೆ, ಸೇತುವೆ ಮತ್ತು ಕಟ್ಟಡಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಗಿದೆ. ಸದರಿ ಪ್ರದೇಶಗಳಲ್ಲಿ ಹಳ್ಳಕೊಳ್ಳಗಳು ಗರಿಷ್ಠ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ.

 

 

ಕಳೆದ ಸಾಲಿನಲ್ಲಿ ಉಂಟಾದ ಅತೀವೃಷ್ಟಿಯಿಂದಾಗಿ ಕಿಲ್ಲೂರು – ಕಾಜೂರು ಜಿಲ್ಲಾ ಮುಖ್ಯ ರಸ್ತೆಯ ಕಾಜೂರು ಎಂಬಲ್ಲಿ ಹಾಗೂ ಮುಂಡಾಜೆ  ಕಡಿರುದ್ಯಾವರ – ದಿಡುಪೆ – ಸಂಸೆ ಜಿಲ್ಲಾ ಮುಖ್ಯ ರಸ್ತೆಯ ಕುಕ್ಕಾವು ಎಂಬಲ್ಲಿ ಸೇತುವೆಯನ್ನು ಪುನರ್ ನಿರ್ಮಿಸಲಾಗಿದ್ದು, ಸದರಿ ಸೇತುವೆಗಳನ್ನು ಸಹ ಪರಿಶೀಲಿಸಲಾಗಿದೆ. ಸೇತುವೆಯಲ್ಲಿ ನೀರು ಗರಿಷ್ಠ ಮಟ್ಟದಲ್ಲಿ ಹರಿಯುತ್ತಿದ್ದು, ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಯಾವುದೇ ಅಡೆತಡೆ ಉಂಟಾಗಿರುವುದಿಲ್ಲ ಎಂದು ತಿಳಿಸಿದರು.

Also Read  ಕಡಬ: 'ಝೂಬಿ ಗೋಲ್ಡ್' ವಿಸ್ತೃತ ಚಿನ್ನಾಭರಣ ಮಳಿಗೆ ಶುಭಾರಂಭ ➤ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್, ಲಕ್ಕೀ ಕೂಪನ್ ಡ್ರಾ

 

 

error: Content is protected !!
Scroll to Top