ತಲಕಾವೇರಿ ಗುಡ್ಡ ಕುಸಿತ➤ಬಂಟ್ವಾಳದ ಓರ್ವ ಅರ್ಚಕರು ನಾಪತ್ತೆ..!!!

(ನ್ಯೂಸ್ ಕಡಬ) newskadaba.com ಬಂಟ್ವಾಳ: ಆ.07,. ತಲಕಾವೇರಿಯಲ್ಲಿ ಗುಡ್ಡ ಕುಸಿದು ನಾಪತ್ತೆಯಾದ ಐವರು ಅರ್ಚಕರ ಪೈಕಿ ಒಬ್ಬರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ಎಂದು ಮಾಹಿತಿ ಲಭ್ಯವಾಗಿದ್ದು, ರಾಮಕೃಷ್ಣ ರೇಣುಕಾ ಭಟ್ ದಂಪತಿಯ ಪುತ್ರ 24 ವರ್ಷದ ರವಿಕಿರಣ್ ನಾಪತ್ತೆಯಾದ ಯುವ ಅರ್ಚಕರು ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗುರುವಾರ ಬೆಳಿಗ್ಗೆ ತಲಕಾವೇರಿಯಲ್ಲಿ ಗುಡ್ಡ ಜರಿದು ಬಿದ್ದ ಹಿನ್ನೆಲೆಯಲ್ಲಿ ಆರ್ಚಕರ ಮನೆ ಸಂಪೂರ್ಣ ಜಲಸಮಾದಿಯಾಗಿತ್ತು. ಮನೆಯೊಳಗೆ ಇದ್ದ ಎಲ್ಲರೂ ನಾಪತ್ತೆಯಾಗಿದ್ದರು. ನಾಪತ್ತೆಯಾದವರಲ್ಲಿ ಬಂಟ್ವಾಳ ಮೂಲದ ರವಿಕಿರಣ್ ಕೂಡ ಒರ್ವರಾಗಿದ್ದಾರೆ.

Also Read  ಬಂಟ್ವಾಳ: ಎ.26 ರಂದು ಯೋಗಿ ಆದಿತ್ಯನಾಥ್ ರೋಡ್ ಶೋ

ರಾಮಕೃಷ್ಣ (ಅಪ್ಪಣ್ಣ) ಭಟ್ ಅವರಿಗೆ ರವಿಕಿರಣ್ ಹಾಗೂ ಶಶಿಕಿರಣ್ ಎಂಬ ಇಬ್ಬರು ಪುತ್ರರು. ಇವರಲ್ಲಿ ದೊಡ್ಡ ಮಗ ರವಿಕಿರಣ್.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಊರಲ್ಲೆ ಇದ್ದ ರವಿಕಿರಣ್ ಬಳಿಕ ಇವರನ್ನು ತಲಕಾವೇರಿಯ ಆರ್ಚಕರು ಕರೆದ ಹಿನ್ನೆಲೆಯಲ್ಲಿ ತಲಕಾವೇರಿಗೆ ವಾಪಾಸು ಹೋಗಿದ್ದರು.

error: Content is protected !!
Scroll to Top