ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹದ ಆತಂಕ➤ ಮುನ್ನೆಚ್ಚರಿಕ ಕ್ರಮವಾಗಿ 32 ಕುಟುಂಬಗಳ ಸ್ಥಳಾಂತರ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಆ.7:  ಕರಾವಳಿ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೇತ್ರಾವತಿಯ ಉಪನದಿಗಳು ಉಕ್ಕಿಹರಿಯುತ್ತಿದೆ.ಇದರಿಂದಾಗಿ ಈ ಭಾಗದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಹಾಗಾಗಿ ಮುನ್ನೆಚ್ಚರಿಕ ಕ್ರಮವಾಗಿ ತಾಲೂಕು ಆಡಳಿತ ಕಾಳಜಿ ಕೇಂದ್ರಕ್ಕೆ ಎಂಟು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಇನ್ನು, ಮಿತ್ತಬಾಗಿಲು ಗ್ರಾಮದ ಗಣೇಶ್ ನಗರವನ್ನು ಅಪಾಯಕಾರಿ ಪ್ರದೇಶ ಎಂದು ಗುರುತಿಸಿ ಇಲ್ಲಿ ವಾಸವಾಗಿರುವ 32 ಕುಟುಂಬಗಳನ್ನು ಗುರುವಾರ ರಾತ್ರಿಯೇ ತಾಲೂಕು ಆಡಳಿತ ಸ್ಥಳಾಂತರಿಸಿದೆ. ಜಿಲ್ಲಾಡಳಿತದ ಸೂಚನೆಯಂತೆ ಪುತ್ತೂರು ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್ ಜೆ. ಅವರು ಗುರುವಾರ ಸ್ಥಳ ಪರಿಶೀಲಿಸಿ ತಕ್ಷಣ ತುರ್ತು ಕ್ರಮ ಕೈಗೊಂಡಿದ್ದಾರೆ.

Also Read  ಮಂಗಳೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ ► ನಿದ್ರಿಸುತ್ತಿದ್ದ ವ್ಯಕ್ತಿಯ ಕೊಂದ ಆರೋಪಿಗಳ ಬಂಧನ

ಗಣೇಶ್ ನಗರದ 32 ಕುಟುಂಬಗಳಲ್ಲಿ 149 ಮಂದಿ ಹೆಚ್ಚು ಅಪಾಯಕಾರಿ ಸ್ಥಳದಲ್ಲಿರುವುದಾಗಿ ತಾಲೂಕು ಆಡಳಿತ ಗುರುತಿಸಿತ್ತು. ಇದೀಗ ಇವರಲ್ಲಿ ಕೆಲವರಿಗೆ ಮಿತ್ತಬಾಗಿಲು ಗ್ರಾಮದ ಸರಕಾರಿ ಶಾಲೆಯ ಕಾಳಜಿ ಕೇಂದಲ್ಲಿ ಆಶ್ರಯ ನೀಡಲಾಗಿದ್ದರೆ ಇನ್ನುಳಿದ 115 ಮಂದಿಗೆ ಸ್ನೇಹಿತರ ಮನೆಗೆ ಹಾಗೂ ಸಂಬಂಧಿಕರ ಮನೆಯಲ್ಲಿ ಆಶ್ರಯನೀಡಲಾಗಿದೆ.

error: Content is protected !!
Scroll to Top