ಮತ್ತೊಬ್ಬ ನಟ ಆತ್ಮಹತ್ಯೆ ➤ ಮುಂಬೈನಲ್ಲಿ ಸಮೀರ್ ಶರ್ಮಾ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ಮುಂಬೈ, ಆ.06:  ನಟ ಸುಶಾಂತ್ ಸಿಂಗ್ ಸಾವಿನ ನೋವು ಮಾಸುವ ಮುನ್ನವೇ ಕಿರುತೆರೆ ಕ್ಷೇತ್ರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ, ನಟ ಸಮೀರ್ ಶರ್ಮಾ ಮುಂಬೈ ಉಪನಗರ ನಿವಾಸದಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.

 

ಸಮೀರ್ ಶರ್ಮ ಅವರಿಗೆ 44 ವರ್ಷ ವಯಸ್ಸಾಗಿತ್ತು. ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದರು. “ಕ್ಯೂಂಕಿ ಸಾಸ್ ಭಿ ಕಭಿ ಬಹು ತಿ, “,”ಕಹಾನಿ ಘರ್ ಘರ್ ಕಿ “ಮತ್ತು” “ಯೆ ರಿಶ್ತೆ ಹೈ ಪ್ಯಾರ್ ಕೆ” ಮೊದಲಾದ ಧಾರಾವಾಹಿಗಳಲ್ಲಿ ಪಾತ್ರಗಳಿಂದ ಅವರು ಜನಪ್ರಿಯತೆ ಗಳಿಸಿದ್ದರು.  ಶರ್ಮಾ ಸೀಲಿಂಗ್ ಫ್ಯಾನ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಸ್ಥಳಕ್ಕೆ ಬಂದ ಪೊಲೀಸರಿಗೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ ಎಂದು ಮಲಾಡ್ ಪೊಲೀಸರು ತಿಳಿಸಿದ್ದಾರೆ.

Also Read  ಮುಂಗಾರಿಗೂ ಮುನ್ನವೇ ರಾಜ್ಯದಲ್ಲಿ ವರುಣನ ಅಬ್ಬರ ➤`ಯೆಲ್ಲೋ ಅಲರ್ಟ್'; ಹವಾಮಾನ ಇಲಾಖೆ ಮುನ್ಸೂಚನೆ

 

 

error: Content is protected !!
Scroll to Top