ಸೈನೈಡ್‌ ಮೋಹನ್‌ ► 2003 ರಿಂದ 2009 ರ ವರೆಗೆ 20 ಯುವತಿಯರ ಹತ್ಯೆ….!!!

(ನ್ಯೂಸ್ ಕಡಬ) newskadaba.com ಬಂಟ್ವಾಳ,ಸೆ.14, 2003 ರಿಂದ 2009 ರ ವರೆಗೆ 20 ಯುವತಿಯರನ್ನು ಹತ್ಯೆ ಮಾಡಿದ ಸೈನೈಡ್‌‌ ಮೋಹನ್‌ನ ಆ ಕೊಲೆಗಳ ಹಿಂದಿನ ಹಿಸ್ಟರಿ ಕೇಳಿದರೆ ಒಂದು ಕ್ಷಣ ಉಸಿರೆ ನಿಂತು ಹೋಗುವಷ್ಟು ಭಯ ಹುಟ್ಟುತ್ತದೆ.

ವೃತ್ತಿಯಲ್ಲಿ ಅಧ್ಯಾಪಕನಾಗಿದ್ದ ಮೋಹನ್‌ ಬಂಟ್ವಾಳ ತಾಲೂಕಿನ ಕನ್ಯಾನದ ನಿವಾಸಿ. ವಿವಾಹಿತನಾಗಿದ್ದ ಈತ ತನ್ನ ತಾಯಿಯ ಜೊತೆಗೆ ವಾಸವಾಗಿದ್ದ. ಅಧ್ಯಾಪಕನಾದ ಈತ ಹಲವಾರು ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದ ಹಾಗೆ ಅಲ್ಲಿ ತನಗೆ ಪರಿಚಯವಾಗುವ ಯುವತಿಯರನ್ನು ತನ್ನ ಪ್ರೇಮದ ಬಲೆಯಲ್ಲಿ ಸಿಲುಕಿಸುತ್ತಿದ್ದ. ಹೀಗೆ ಇವನ ಪ್ರೇಮದ ಬಲೆಗೆ ಬಿದ್ದ ಹೆಣ್ಮಕ್ಕಳಿಗೆ ಚಿನ್ನಾಭರಣಗಳನ್ನು ಧರಿಸಿ ಮಧು ಮಗಳಂತೆ ಶೃಂಗರಿಸಿಕೊಂಡು ಬರುವಂತೆ ಹೇಳುತ್ತಿದ್ದ.

ರಾತ್ರಿ ಅವರೊಂದಿಗೆ ಲೈಂಗಿಕ ಸುಖ ಪಡೆದು ಬಳಿಕ ಸುತ್ತಾಡಲು ಹೋಗೋಣ ಎಂದು ಹೊರಗೆ ಕರೆದುಕೊಂಡು ಹೋಗುತ್ತಿದ್ದ. ಈ ಸಂದರ್ಭ ಆಭರಣಗಳನ್ನು ರೂಮ್‌ನಲ್ಲೇ ಇರಿಸುವಂತೆಯೂ ಸಲಹೆ ನೀಡುತ್ತಿದ್ದ. ಹೀಗೆ ಹೊರಗೆ ಬಂದ ಬಳಿಕ ಯಾವುದೋ ಬಸ್ ನಿಲ್ದಾಣಗಳಲ್ಲಿ ಗರ್ಭ ನಿರೋಧಕ ಮಾತ್ರೆಯೆಂದು ಸೈನೈಡ್‌ ಗುಳಿಗೆ ತಿನ್ನಲು ಕೊಡುತ್ತಿದ್ದ. ಜೊತೆಗೆ ಇದನ್ನು ಶೌಚಾಲಯದಲ್ಲೇ ತೆಗೆದುಕೊಳ್ಳುವಂತೆ ಹೇಳುತ್ತಿದ್ದ. ಯುವತಿಯರು ಹಾಗೆ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದರು.

Also Read  ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ಜಿಲ್ಲೆಯಲ್ಲಿ ಯುವತಿಯರು ನಾಪತ್ತೆಯಾಗುವ ಪ್ರಕರಣ ಹೆಚ್ಚುತ್ತಿದ್ದಂತೆ ಲವ್ ಜಿಹಾದ್ ಆಗಿರಬಹುದೆಂದೂ ಶಂಕಿಸಿ ಹಿಂದೂ ಸಂಘಟನೆಗಳು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆಗಲೇ ಬೆಂಗಳೂರು, ಮೈಸೂರು, ಮಡಿಕೇರಿ ಬಸ್ ನಿಲ್ದಾಣಗಳಲ್ಲಿ ಸತ್ತು ಬಿದ್ದಿದ್ದ ಹೆಣ್ಮಕ್ಕಳ ಶವದ ಬಗ್ಗೆ  ಪೊಲೀಸರು ತನಿಖೆ ನಡೆಸಿದರು.

ಇದೇ ವೇಳೆ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಬಂಟ್ವಾಳ ವೃತ್ತ ನಿರೀಕ್ಷಕ ನಂಜುಂಡೇ ಗೌಡ ಹಾಗೂ ಅವರ ತಂಡಕ್ಕೆ ಯುವತಿಯೋರ್ವಳು ಮೋಹನನ ವಿರುದ್ಧ ನೀಡಿದ್ದ ದೂರಿನನ್ವಯ ತನಿಖೆ ಮುಂದುವರಿಸಿದ್ದರು. ಅತ್ತ ಶಾಲೆಗೂ ಸರಿಯಾಗಿ ಹೋಗದೆ ಸುತ್ತಾಡುತ್ತಿದ್ದ ಮೋಹನ ಇಷ್ಟೆಲ್ಲಾ ಯುವತಿಯರ ಕೊಲೆಗೈದಿರುವುದರ ಬಗ್ಗೆ ಪೊಲೀಸರಲ್ಲಿ ಸಂಶಯ ಹೆಚ್ಚಾಗಿತ್ತು. ಬಂಟ್ವಾಳದ ಯುವತಿಯೋರ್ವಳ ಸಂಪರ್ಕಕ್ಕೆ ಯತ್ನಿಸುತ್ತಿದ್ದ ಮೋಹನ್ ಕುಮಾರ್‌ನನ್ನು ಆಕೆಯ ಸಹಾಯದಿಂದಲೇ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ತನ್ನ ದುಷ್ಕೃತ್ಯಗಳನ್ನು ಬಾಯ್ಬಿಟ್ಟಾಗ ಪೊಲೀಸರೇ ಬೆಚ್ಚಿಬಿದ್ದಿದ್ದರು.

Also Read  ಗೃಹ ಕಾರ್ಮಿಕರ ಕನಿಷ್ಟ ವೇತನ ದರ ಸಿಗುತ್ತಿಲ್ಲವೇ? ಕಾರ್ಮಿಕ ಇಲಾಖೆಗೆ ದೂರು ನೀಡಿ

ಮೋಹನನ ಪೈಶಾಚಿಕ ಕೃತ್ಯಕ್ಕೆ ಜಿಲ್ಲೆಗೆ ಜಿಲ್ಲೆಯೇ ಬೆಚ್ಚಿ ಬಿದ್ದಿತ್ತು. ಮೋಹನ್‌ ಮೂರು ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿದ್ದು ಮೂರು ಪ್ರಕರಣಗಳಲ್ಲಿ  ಮರಣ ದಂಡನೆಯೂ ಪ್ರಕಟವಾಗಿದೆ. ಇದೀಗ ನಾಲ್ಕನೆ ಪ್ರಕರಣವೂ ಸಾಬೀತಾಗಿದ್ದು, ಜಿಲ್ಲಾ ಆರನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಸೈನೈಡ್‌ ಮೋಹನನ ನಾಲ್ಕನೇ ಪ್ರಕರಣಕ್ಕೆ ಸೆ. 15ರಂದು ಶಿಕ್ಷೆ ಪ್ರಕಟಿಸಲಿದೆ.

error: Content is protected !!
Scroll to Top