ನೇತ್ರಾವತಿ ಸೇತುವೆಯ ಮೇಲೆ ಬೈಕ್ ಪತ್ತೆ ➤ ಬೈಕ್ ಸವಾರ ನಾಪತ್ತೆ, ದೂರು ದಾಖಲು

(ನ್ಯೂಸ್ ಕಡಬ) newskadaba.com ಉಳ್ಳಾಲ, ಆ.06:  ನೇತ್ರಾವತಿ ಸೇತುವೆಯ ಮೇಲೆ  ಬುಧವಾರ ಬೈಕ್‌ ಒಂದು ಪತ್ತೆಯಾಗಿದ್ದು ಬೈಕ್‌ ಸವಾರ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇವರು ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆ ದೂರು ದಾಖಲಿಸಿದ್ದಾರೆ.

 

ನಾಪತ್ತೆಯಾದವರನ್ನ 32 ಎರಡು ವರ್ಷ ಪ್ರಾಯದ ಎಂ. ರಘು ಎಂದು ಗುರುತಿಸಲಾಗಿದೆ. ಮೊಗವೀರಪಟ್ನದ ಪತ್ನಿ ಮನೆಯಿಂದ ಪಿಲಾರು ಲಕ್ಷ್ಮೀಗುಡ್ಡೆಯ ಖಾಸಗಿ ಆಹಾರ ಸಂಸ್ಥೆಗೆ ರಾತ್ರಿ ಪಾಳಯದ ಉದ್ಯೋಗಕ್ಕೆ ತೆರಳಿದವರು ಮರಳಿ ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ.
ಮರುದಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ರಘು ಉಪಯೋಗಿಸುತ್ತಿದ್ದ ದ್ವಿಚಕ್ರ ವಾಹನ, ಮೊಬೈಲ್ ಫೋನ್, ಪರ್ಸ್, ಚಪ್ಪಲಿಗಳು ಸೇತುವೆ ಮೇಲೆ ಪತ್ತೆಯಾಗಿದೆ. ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಾಗ ರಘು ಅಂದು ಕೆಲಸಕ್ಕೂ ತೆರಳದೇ ಇರುವ ಬಗ್ಗೆ ಮಾಹಿತಿ ದೊರೆತಿತ್ತು. ಇದೀಗ ಪತ್ನಿ ಚೈತ್ರ ಎಂಬವರು ಉಳ್ಳಾಲ ಠಾಣೆಯಲ್ಲಿ ನೀಡಿದ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದೆ.

Also Read  HSRP ನಂಬರ್ ಪ್ಲೇಟ್ ಅಳವಡಿಕೆಗೆ ನ.30ರವರೆಗೆ ಗಡುವು ವಿಸ್ತರಣೆ

 

 

error: Content is protected !!
Scroll to Top