(ನ್ಯೂಸ್ ಕಡಬ) newskadaba.com ಮಂಗಳೂರು, ಆ.06: ಕೊರೋನಾ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆಯು ತುಂಬಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಬಸ್ ಗಳಿಗೆ ದರವನ್ನು ಶೇ.15ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರವು ಅನುಮತಿ ನೀಡಿದೆ.
ವಾರಾಂತ್ಯ ಮತ್ತು ಹಬ್ಬದ ಋತುವಿಗಳಲ್ಲಿ ದರವನ್ನು ದ್ವಿಗುಣಗೊಳಿಸಲು ಮೊದಲ ಬಾರಿಗೆ ರಾಜ್ಯ ಸರ್ಕಾರವು ಅನುಮತಿ ನೀಡಿದ್ದು, ಇದರಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಲಿದೆ. ಟೋಲ್ ಗೇಟ್ ನಲ್ಲಿ ನೀಡುವಂತಹ ಮೊತ್ತವನ್ನು ಕೂಡ ಪ್ರಯಾಣಿಕರಿಂದ ಪಡೆಯಬಹುದು ಎಂದು ರಾಜ್ಯ ಸರ್ಕಾರವು ಹೇಳಿದೆ. ಈ ಹಿಂದೆ ಇದನ್ನು ಖಾಸಗಿ ಬಸ್ ನವರೇ ಪಾವತಿಸಬೇಕಿತ್ತು. ನಗರ ಪ್ರದೇಶಗಳಲ್ಲಿ ಬಸ್ ದರವು ಕನಿಷ್ಠ 8 ರೂಪಾಯಿ ಆಗಿರಲಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದು 6.50 ಆಗಿರಲಿದೆ ಎಂದು ರಾಜ್ಯ ಸರ್ಕಾರವು ಸ್ಪಷ್ಟವಾಗಿ ಹೇಳಿದೆ.