ಚಾರ್ಮಾಡಿ ಘಾಟ್ ಹೆದ್ದಾರಿಗೆ ಬಂಡೆ ಕುಸಿತ ತೆರವು ಕಾರ್ಯಚರಣೆ ಯಶಸ್ವಿ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ, ಆ.6: ಮಂಗಳೂರು – ಚಿಕ್ಕಮಗಳೂರು ರಸ್ತೆಯ ಚಾರ್ಮಾಡಿ ಘಾಟ್ 2 ,3 ನೇ ಮತ್ತು 6ನೇ ತಿರುವಿನಲ್ಲಿ ಭೂ ಕುಸಿತದಿಂದಾಗಿ ಬುಧವಾರ ಸಂಜೆ ಬೃಹದಾಕಾರದ ಎರಡು ಬಂಡೆಗಳು ಕುಸಿದು ಬಿದ್ದಿದೆ.


ತಕ್ಷಣ ಕಾರ್ಯಪ್ರವೃತರಾದ ಅಧಿಕಾರಿಗಳು, ಬುಧವಾರ ಸಂಜೆ ಏಳರ ಬಳಿಕ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ರಾತ್ರಿ ಜೆಸಿಬಿ ಮುಖಾಂತರ ತೆರವು ಕಾರ್ಯ ನಡೆಸಿದ್ದಾರೆ. ಸದ್ಯ ಒಂದು ವಾಹನ ಸಾಗುವಷ್ಟು ದಾರಿ ತೆರವು ಮಾಡಲಾಗಿದೆ. ಯಾವುದೇ ಅಪಾಯ, ಹಾನಿ ಸಂಭಿವಿಸಿಲ್ಲ ಎಂದು ತಿಳಿದು ಬಂದಿದೆ.

Also Read  ದ್ವಿತೀಯ ಪಿಯುಸಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಸೂಚನೆ       ➤ ಈ ನಿಯಮ ಪಾಲನೆ ಕಡ್ಡಾಯ

ಚಾರ್ಮಾಡಿ ಘಾಟ್ ಮತ್ತು ಚಿಕ್ಕಮಗಳೂರು ಪ್ರದೇಶದಲ್ಲಿ ಪದೇ ಪದೇ ಭೂ ಕುಸಿತ ಸಂಭವಿಸುತ್ತಿರುವುದರಿಂದಾಗಿ ವಾಹನ ಸವಾರರು ಎಚ್ಚರವಾಗಿರುವುದು ಅಗತ್ಯ.

error: Content is protected !!
Scroll to Top