ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆ ➤ ನಿರ್ವಿಘ್ನವಾಗಿ ನಡೆಯಲು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com.ಬಂಟ್ವಾಳ ,ಆ.5: ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿಪೂಜೆ ನೆರವೇರಿಸಲಿದ್ದು. ಈ ಕಾರ್ಯಕ್ರಮ ಯಶಸ್ವಿಯಾಗಲಿ ಮುಂದೆ ಮಂದಿರ ನಿರ್ಮಾಣ ಕಾರ್ಯವು ಕೂಡ ಸೂಸುತ್ರವಾಗಿ ನಡೆಯಲೆಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ಬಂಟ್ವಾಳ ವತಿಯಿಂದ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ನಂತರ ಅಯೋಧ್ಯೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕರವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಆಶಿರ್ವಾದ ಪಡೆದರು.ಇವರ ಜೊತೆಗೆ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಮಾನಾಥ ರಾಯಿಯವರು ಬಿಜೆಪಿ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿ, ವೆಂಕಟೇಶ್ ನಾವಡ, ತಾ.ಪಂ ಸದಸ್ಯ ಯಶವಂತ ಪೊಳಲಿ,ಯುವ ಮೋರ್ಚಾದ ಸುದರ್ಶನ್ ಬಜ,ಪ್ರದೀಪ್ ಅಜ್ಜಿಬೆಟ್ಟು,ಅಶ್ವಥ್,ಕಾರ್ತಿಕ್ ಬಳ್ಳಾಲ್, ಕಿಶೋರ್ ಪಲ್ಲಿಪ್ಪಾಡಿ.ಲೋಕೇಶ್ ಭರಣಿ,ನಂದರಾಮ್ ರೈ,,ಸುಕೇಶ್ ಚೌಟ,ವಾಮನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Also Read  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಘೋಷಣೆ.!

error: Content is protected !!
Scroll to Top