ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ರಕ್ತದಾನ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.05:  ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಸಂಸದೆ ಶೋಭಾ ಕರಂದ್ಲಾಜೆ ರವರು ರಕ್ತ ದಾನ ಮಾಡಿದರು. ಪ್ರತೀ 3 ತಿಂಗಳಿಗೊಂದು ಬಾರಿ ರಕ್ತದಾನ ಮಾಡುವ ಶೋಭಾ ಕರಂದ್ಲಾಜೆ, ಕಳೆದ ದಿನ ರಾಷ್ಟ್ರೋತ್ತಾನ ರಕ್ತ ನಿಧಿಯ ಮೂಲಕ ಥಲಸ್ಸೆಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ರಕ್ತದಾನ ಮಾಡಿದರು.

 

ಬೆಂಗಳೂರಿನ ರಾಷ್ಟ್ರೋತ್ತಾನ ರಕ್ತ ನಿಧಿಯ ವಿಶೇಷ ರೀತಿಯ ಸೇವೆ ಮಾಡುತ್ತಿದೆ. ಪ್ರತೀ ತಿಂಗಳು 700ಕ್ಕೂ ಅಧಿಕ ಥಲಸ್ಸೆಮಿಯಾ ಹಾಗೂ ಇತರ ವಿಶಿಷ್ಟ ಕಾಲಯಿಲೆಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಉಚಿತವಾಘಿ ರಕ್ತವನ್ನು ಒದಗಿಸುವ ಕೆಲಸವನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದಾರೆ. ಕೋವಿಡ್-19 ಕಾರಣದಿಂದ ದೇಶದೆಲ್ಲೆಡೆ ರಕ್ತ ನಿಧಿ ಕೇಂದ್ರಗಳು ಅಗತ್ಯದಷ್ಟು ದೊರಕದೆ, ರಕ್ತದ ಅಭಾವವನ್ನು ಅನುಭವಿಸುತ್ತಿದೆ. ಈ ಕಾರಣದಿಂದ ತುರ್ತು ರಕ್ತದ ಅಗತ್ಯವಿರುವ ಹಲವಾರು ಜನರಿಗೆ ಸಕಾಲದಲ್ಲಿ ರಕ್ತ ದೊತಕುತ್ತಿಲ್ಲ. ಆದರೆ ಭಾರತದಂತಹ ಜನಸಂಖ್ಯೆಯನ್ನು ವರವಾಗಿ ಪಡೆದ ದೇಶಕ್ಕೆ ರಕ್ತದ ಅವಶ್ಯಕತೆಯಿರುವ ಪ್ರತಿಯೊಬ್ಬ ಮನುಷ್ಯನಿಗೂ ಅಗತ್ಯಕ್ಕಿಂತ ಹೆಚ್ಚು ರಕ್ತನ್ನು ಪೂರೈಸುವ ಸಾಮಥ್ರ್ಯವಿರುವ ಮಾನವ ಸಂಪನ್ಮೂಲವಿದೆ. ಈ ಕಾರಣದಿಂದ ರಕ್ತದಾನ ಮಾಡಲು ಯೋಗ್ಯರಿರುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಹತ್ತಿರದ ರಕ್ತನಿಧಿ ಕೇಂದ್ರಗಳಿಗೆ ಭೇಟಿ ನೀಡಿ ರಕ್ತದಾನ ಮಾಡುವಂತೆ ಈ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

Also Read  ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಾಪಿಸಿದ ಚರ್ಮಗಂಟು ರೋಗ      

 

error: Content is protected !!
Scroll to Top