ಚಲಿಸುತ್ತಿದ್ದ ಪಿಕಪ್ ಮೇಲೆ ಉರುಳಿ ಬಿದ್ದ ಹೈಟೆನ್ಸನ್ ವಿದ್ಯುತ್ ಕಂಬ ➤ ತಪ್ಪಿದ ಭಾರಿ ಅನಾಹುತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , ಆ.04:  ಕರಾವಳಿಯಲ್ಲಿ ಮಳೆರಾಯನ ಅಬ್ಬರ ಮುಂದವರಿಯುತ್ತಿದ್ದು, ಸಣ್ಣ ಪುಟ್ಟ ಅವಾಂತಗಳು ಸೃಷ್ಟಿಯಾಗುತ್ತಲೇ ಇದೆ. ಬೆಳ್ತಂಗಡಿ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಪಡಂಗಡಿ ಗ್ರಾಮದ ಕನ್ನಡಿ ಕಟ್ಟೆ ರಬ್ಬರ್ ನರ್ಸರಿ ಮುಂಬಾಗದಲ್ಲಿ ಚಲಿಸುತ್ತಿದ್ದ ಪಿಕಪ್ ವಾಹನದ ಮೇಲೆ ಕರೆಂಟ್ ಕಂಬವೊಂದು ಉರುಳಿ ಬಿದ್ದ ದುರ್ಘಟನೆ ಇಂದು ಮುಂಜಾನೆ ಸಂಭವಿಸಿದೆ.

 

 

 

ಇತ್ತಿಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಸುಬೋದ್ ಮಹಲ್ ಬಳಿ ಚಲಿಸುತ್ತಿದ್ದ ಪಿಕಪ್ ವಾಹನ ದ ಮೇಲೆ ಹೈಟೆನ್ಸನ್ ವಿದ್ಯುತ್ ಕಂಬ ಉರುಳಿ ಬಿದ್ದ ಘಟನೆ ಪಡಂಗಡಿಯಲ್ಲಿ ನಡೆದಿದೆ. ಬೆಳಗ್ಗಿನ ಜಾವ ಸುಮಾರು 5 ಗಂಟೆಗೆ ವೇಣೂರು ಗೋಳಿಯಂಗಡಿಯಿಂದ ಗುರುವಾಯನಕೆರೆಗೆ ಲಿನ್ಸ್ ಟಿ.ಡಿಯವರು ಪಿಕಪ್ ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭ ಪಡಂಗಡಿ ಸುಬೋದ್ ಮಹಲ್ ಬಳಿ ಹೈಟೆನ್ಸನ್ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಕಂಬ ಬಿದ್ದ ರಭಸಕ್ಕೆ ಪಿಕಪ್ ನಜ್ಜುಗುಜ್ಜಾಗಿದ್ದು ಪಿಕಪ್ ನಲ್ಲಿದ್ದ ಡ್ರೈವರ್ ಗೆ ಗಾಯವಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಎರಡು ಕಂಬಗಳು ವಾಲಿದ್ದು ಬೀಳುವ ಹಂತದಲ್ಲಿದ್ದೆ. ಘಟನೆ ನಡೆದ ಕೂಡಲೇ ಊರವರು, ಸಾರ್ವಜನಿಕರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು ಕೂಡಲೇ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಇದೀಗಾ ಅಧಿಕಾರಿಗಳು ಸ್ಥಳಕ್ಕೆ  ಆಗಮಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

Also Read  ಮೂಡಬಿದಿರೆ ಘಟಕದಲ್ಲಿ ವನಮಹೋತ್ಸವ ಆಚರಣೆ ► ಕವಾಯತು ವೀಕ್ಷಣೆ

 

 

 

error: Content is protected !!
Scroll to Top