ಕಡಬ ತಾಲೂಕಿನ ಪ್ರಸಿದ್ದ ನಾಟಿವೈದ್ಯೆ ರಾಮಕ್ಕ ಇನ್ನಿಲ್ಲ

(ನ್ಯೂಸ್ ಕಡಬ) newskadaba.com. ಕಡಬ,ಆ.3: ಹಲವು ವರ್ಷಗಳಿಂದ ನಾಟಿ ವೈದ್ಯೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟು ಗ್ರಾಮದ ಪ್ರಸಿದ್ಧ ನಾಟಿ ವೈದ್ಯೆ ರಾಮಕ್ಕ ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು.

ಸುಮಾರು 75 ವರ್ಷ ವಯಸ್ಸಿನ ರಾಮಕ್ಕ ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಸಂತಾನ ಭ್ಯಾಗ್ಯ ಇಲ್ಲದವರಿಗೆ ಔಷಧ ನೀಡುವ ಮೂಲಕ ಹಲವಾರು ದಂಪತಿಗಳ ಬಾಳಿಗೆ ಬೆಳಕಾಗಿದ್ದ ಈ ನಾಟಿ ವೈದ್ಯೆ. ತನ್ನ ತಂದೆಯಿಂದ ನೋಡಿ ಕಲಿತ ನಾಟಿವೈಧ್ಯ ಪದ್ದತಿ ತಮ್ಮಲ್ಲಿ ರೊಢಿಸಿಕೊಂಡು ಹಲವು ಜೀವಗಳಿಗೆ ವರದಾನಗಿದ್ದರು.

Also Read  ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು-ಮಸ್ತಿಗೆ ಬ್ರೇಕ್: ಖಾಕಿ ಗಸ್ತು

ಅವರ ಸೇವೆಯನ್ನು ಗುರುತಿಸಿ.ಧರ್ಮಸ್ಥಳ ದೇಗುಲದ ವತಿಯಿಂದ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ವತಿಯಿಂದ,ಸಮ್ಮಾನಿತರಾಗಿದ್ದರು. ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದ ರಾಮಕ್ಕ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

error: Content is protected !!
Scroll to Top