ಕನಕಮಜಲು: ಮುಗೇರು ಮಾಣಿಮಜಲು ಶಾಲಾ ಕಟ್ಟಡಕ್ಕೆ ಬಣ್ಣ ಬಳಿದ ಯುವಕ ಮಂಡಲ

(ನ್ಯೂಸ್ ಕಡಬ) newskadaba.com ಕನಕಮಜಲು, ಆ.03:  ಕೊರೋನಾ ಭೀತಿಯಿಂದಾಗಿ ಸುಮಾರು 5 ರಿಂದ 6 ತಿಂಗಳುಗಳಿಂದ ಕಾಲ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದೆ. ಮತ್ತೊಂದೆಡೆ ಶಾಲಾ ಕಾಲೇಜುಗಳ ಸ್ಪಚ್ಚತೆಯ ಕಾರ್ಯದಲ್ಲಿ ಕೆಲವರು ತೊಡಗಿಕೊಂಡಿದ್ದಾರೆ . ಅದರಂತೆ ಯುವಜನ ವಿಕಾಸ ಕೇಂದ್ರ ಯುವಕ ಮಂಡಲ ಕನಕಮಜಲು ಇದರ ವತಿಯಿಂದ ಮುಗೇರು ಮಾಣಿಮಜಲು ಸ.ಕಿ. ಪ್ರಾ. ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯುವ ಕೆಲಸಕ್ಕೆ ಮುಂದಾಗಿದ್ದಾರೆ.

 

ಮಕ್ಕಳು ಶಾಲೆಗಳತ್ತ ಮುಖ ಮಾಡದೆ ತಿಂಗಳುಗಳೇ ಕಳೆದಿದೆ. ಶಾಲಾ ಕಾಲೇಜುಗಳನ್ನ ತೆರೆಯುವ ಕುರಿತಾಗಿ ಇನ್ನು ಸರ್ಕಾರವು ಚಿಂತನೆ ನಡೆಸುತ್ತಲೇ ಇದೆ. ಇದರ ನಡುವೆ, ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ ಕನಕಮಜಲು ಇದರ ವತಿಯಿಂದ ಕನಕಮಜಲು ಗ್ರಾಮದ ಮುಗೇರು -ಮಾಣಿಮಜಲು ಸರಕಾರಿ ಕಿರಿಯ ಪ್ರಾಥಸಮಿಕ ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಕುದ್ಕುಳಿ, ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ , ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ, ಶಾಲಾ ಹಿರಿಯ ವಿದ್ಯಾರ್ಥಿಗಳು, ಪೋಷಕ ವೃಂದದವರು ಸೇರಿದಂತೆ ಯುವಕ ಮಂಡಲದ ಪೂರ್ವಧ್ಯಕ್ಷರುಗಳು ಹಾಗೂ ಸದಸ್ಯರುಗಳೂ ಸೇರಿದಂತೆ ಆನೇಕರು ಉಪಸ್ಥಿತರಿದ್ದರು.

 

error: Content is protected !!

Join the Group

Join WhatsApp Group