ಕರಾವಳಿಯಲ್ಲಿ ಕೊರೊನಾ ಹಾವಳಿ➤ ಒಟ್ಟು ಪ್ರಕರಣಗಳ ಸಂಖ್ಯೆ 6015ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಆ .3: ಕರಾವಳಿ ಜಿಲ್ಲೆಗಳಾದ ದ.ಕ ಮತ್ತು ಉಡುಪಿಯಲ್ಲಿ ಭಾನುವಾರ 345 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುದರೊಂದಿಗೆ ಕೊರೊನಾ ಪ್ರಕರಣಗಳ ಸಂಖ್ಯೆ 6015ಕ್ಕೆ ತಲುಪಿದೆ.


ದ.ಕ.ದಲ್ಲಿ ಮೃತಪಟ್ಟ 10 ಮಂದಿಯಲ್ಲೂ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 107 ಮಂದಿ ಮಂಗಳೂರು, ಬಂಟ್ವಾಳದ 13, ಬೆಳ್ತಂಗಡಿಯ 19, ಪುತ್ತೂರಿನ 11, ಸುಳ್ಯದ 11, ಇತರ ಜಿಲ್ಲೆಯ 9 ಹಾಗೂ ಇತರ ರಾಜ್ಯದ ಮೂವರು ಒಳಗೊಂಡಿದ್ದಾರೆ. ಮೃತಪಟ್ಟಿರುವ 10 ಮಂದಿಯೂ ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರು. ಎಲ್ಲರಲ್ಲೂ ಸೋಂಕು ದೃಢಪಟ್ಟಿದೆ. ಇದುವರೆಗಿನ ಒಟ್ಟು ಕರೊನಾ ಪ್ರಕರಣ 6015 ತಲಪಿದ್ದರೆ ಸಕ್ರಿಯ ಪ್ರಕರಣಗಳು 3116 ಆಗಿವೆ. ಭಾನುವಾರ 45 ಮಂದಿಯನ್ನು ಬಿಡುಗಡೆಗೊಳಿಸಲಾಗಿದ್ದು ಡಿಸ್ಚಾರ್ಜ್ ಆದವರ ಸಂಖ್ಯೆ 2730 ತಲಪಿದೆ.

Also Read  ಸೋಮವಾರದಂದು ಕಡಬದಲ್ಲಿ ಕಾಂಗ್ರೆಸ್ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ► ರಾಜ್ಯದ ವಿವಿಧ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತಿ

ಉಡುಪಿ ಜಿಲ್ಲೆಯ 75, ಕುಂದಾಪುರದ 55, ಕಾರ್ಕಳದ 51 ಮಂದಿ ಸೋಂಕು ಬಾಧಿತರು. ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಲ್ಲೂರಿನ 54 ವರ್ಷದ ಮಹಿಳೆ ಮೃತಪಟ್ಟಿದ್ದು, ಅವರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4672ಕ್ಕೆ ಏರಿದೆ. 78 ಮಂದಿ ಸೋಂಕಿನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 625 ಮಂದಿಯ ವರದಿ ನೆಗೆಟಿವ್ ಬಂದಿದೆ. ಇದುವರೆಗೆ 2696 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನೂ 616 ಮಂದಿಯ ವರದಿ ಬರಲು ಬಾಕಿ ಇದೆ. 1943 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿಗೆ ಅರ್ಜಿ ಆಹ್ವಾನ

error: Content is protected !!
Scroll to Top