ಮನೆಮಂದಿಗೆಲ್ಲ ಕೊರೊನಾ ಪಾಸಿಟಿವ್ ➤ ಕಡಬ,ಪುತ್ತೂರು ಉಭಯ ತಾಲೂಕಿನಲ್ಲಿ 11 ಮಂದಿಗೆ ಸೋಂಕು

(ನ್ಯೂಸ್ ಕಡಬ) newskadaba.com.ಕಡಬ,ಆ.2: ಪತಿ,ಪತ್ನಿ ಹಾಗೂ ಪುತ್ರ ಸೇರಿ ಒಂದೇ ಮನೆಯ ಮೂವರಿಗೆ ಸೇರಿದಂತೆ ಪುತ್ತೂರು, ಕಡಬ ಉಭಯ ತಾಲೂಕಿನಲ್ಲಿ 11 ಮಂದಿಗೆ ಇಂದು ಕೊರೊನಾ ಪಾಸಿಟಿವ್ ಬಂದಿದೆ.


ನೆಹರೂ ನಗರ ಸಿಟಿಗುಡ್ಡೆ ನಿವಾಸಿ 41 ವರ್ಷದ ಪುರುಷ, 33 ವರ್ಷದ ಅವರ ಪತ್ನಿ ಹಾಗೂ 6 ವರ್ಷದ ಪುತ್ರ, ನಗರಸಭಾ ವ್ಯಾಪ್ತಿಯ ದರ್ಬೆ ನಿವಾಸಿ 27 ವರ್ಷದ ಯುವಕ, ನೆಹರೂ ನಗರದ 39 ವರ್ಷದ ಮಹಿಳೆ, ಬೊಳುವಾರು ನಿವಾಸಿ 61 ವರ್ಷದ ಮಹಿಳೆ, ಗ್ರಾಮೀಣ ಪ್ರದೇಶವಾದ ಆರಿಯಡ್ಕ ನಿವಾಸಿ 58 ವರ್ಷದ ಪುರುಷ, ಕಬಕ ನಿವಾಸಿಗಳಾದ 36 ಮತ್ತು 23 ವರ್ಷದ ಯುವಕರು, ಬೆಳ್ಳಿಪ್ಪಾಡಿ ನಿವಾಸಿ 21 ವರ್ಷದ ಯುವಕನಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ 25 ವರ್ಷದ ಯುವಕನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಇನ್ನು ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಈವರೆಗೆ ಒಟ್ಟು 290 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೂ ಆತಂಕ ಮೂಡಿಸಿದೆ.

Also Read  ಭೂಮಿಯಂತಿರುವ ಮತ್ತೊಂದು ಗ್ರಹವನ್ನು ಪತ್ತೆಹಚ್ಚಿದ ಖಗೋಳಶಾಸ್ತ್ರಜ್ಞರು.!

error: Content is protected !!
Scroll to Top