ಶಿಕ್ಷಣ ಸಚಿವೆ ಕೊರೋನಾಗೆ ಬಲಿ ➤ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆ ಭೇಟಿ ರದ್ದು..!!!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ: ಆ.02., ಕೊರೋನಾ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ನ ಶಿಕ್ಷಣ ಸಚಿವೆ ಕಮಲ ದೇವಿ ವರುಣ್  ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ಮೃತಪಟ್ಟಿದ್ದಾರೆ.

ಜುಲೈ 18ರಂದು ಸಚಿವೆ ಕಮಲ ದೇವಿ ವರುಣ್  ಅವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆ ಲಕ್ನೋದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ರವಿವಾರ ಆಸ್ಪತ್ರೆಯಲ್ಲಿ ನಿಧನರಾದರು.

62 ವರ್ಷದ ಕಮಲ ದೇವಿ ವರುಣ್ ಉತ್ತರ ಪ್ರದೇಶದ ಕಾನ್ಪೂರದಲ್ಲಿ ಮಹಿಳಾ ಹೋರಾಟಗಾರ್ತಿಯಾಗಿ ಪ್ರಖ್ಯಾತಗೊಂಡಿದ್ದರು. ಹಾಗೂ ಇವರು ಎರಡು ಭಾರಿ ಲೋಕಸಭಾ ಸದಸ್ಯೆಯಾಗಿದ್ಧರು.

Also Read  ಕಡಬ ಟೌನ್ ಜುಮಾ ಮಸೀದಿಯ ಅಧ್ಯಕ್ಷ ಎಸ್. ಅಬ್ದುಲ್ ಖಾದರ್ ಹಾಜಿ ನಿಧನ

ಆಗಸ್ಟ್ 5 ರ ರಾಮಮಂದಿರ ಶಂಕುಸ್ಥಾಪನೆಯ ಪೂರ್ವತಯಾರಿ ವೀಕ್ಷಣೆ ಕುರಿತಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಗೆ ಇಂದು ಬೇಟಿ ನೀಡಲು ದಿನ ನಿಗದಿಯಾಗಿತ್ತು. ಆದರೆ ಇದೀಗ ಸಚಿವೆ ನಿಧನರಾದ ಹಿನ್ನಲೆಯಲ್ಲಿ ಯೋಗಿ ಅಯೋಧ್ಯೆ ಭೇಟಿ ರದ್ದುಗೊಂಡಿದೆ.

error: Content is protected !!
Scroll to Top