ಮನೆಯ ಆವರಣಗೋಡೆ ಕುಸಿತ ಮಹಿಳೆ ಅಪಾಯದಿಂದ ಬಚ್ಚಾವ್!

(ನ್ಯೂಸ್ ಕಡಬ) newskadaba.com.ಈಶ್ವರಮಂಗಲ,ಆ.2: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮನೆಯ ಆವರಣಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಅಪಾಯದಿಂದ ಪಾರಾದ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕನೂ೯ರು ಸಮೀಪ ಅಲಬಿಮೂಲೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಕನೂ೯ರು ಸಮೀಪ ಅಲಬಿಮೂಲೆ ಶೇಕ್ ಇಮಾಮು ಶಾಹೀದ್ ರವರ ಮನೆಯ ಅಡುಗೆ ಕೋಣೆಯ ಮೇಲೆ ಅವರ ಮಗನ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹೊರಗಿನಿಂದ ಸದ್ದು ಕೇಳಿಬಂದ ಹಿನ್ನಲೆ ಹೊರಗೆ ಓಡಿದ್ದಾರೆ ಇದರಿಂದಾಗಿ ಭಾರಿ ಅಪಾಯದಿಂದ ಪಾರಾದಂತಾಗಿದೆ.

Also Read  ರೆಂಜಿಲಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಬಿವೃದ್ದಿ ಯೋಜನೆ ➤ ಪದಗ್ರಹಣ ಕಾರ್ಯಕ್ರಮ

ಸ್ಥಳೀಯರು ಬಂದು ಅಡುಗೆ ಮನೆಗೆ ಬಿದ್ದ ಕಲ್ಲನ್ನು ತೆರವುಗೊಳಿಸಿ ಸಹಕರಿಸಿದ್ದಾರೆ. ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ,ಮಾಜಿ ಸದಸ್ಯರಾದ ಎಂ ಬಿ ಇಬ್ರಾಹಿಂ,ಅಬ್ದುಲ್ ಖಾದರ್,ಗ್ರಾಮ ಕರಣಿಕ ರಾಧಾಕೃಷ್ಣ,ಸಹಾಯಕ ರಘುನಾಥ,ಚಾಪ೯ಟೆ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top