ಅಡಿಕೆ ಬೆಳೆಗಾರರಿಗೆ ವರವಾದ ಲಾಕ್​ಡೌನ್ ➤ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಅಡಿಕೆ ಧಾರಣೆ

(ನ್ಯೂಸ್ ಕಡಬ) newskadaba.com ಕಡಬ, ಆ.02: ಲಾಕ್​ಡೌನ್ ನಿಂದ ಭಾಗಶಃ ಎಲ್ಲಾ ಬೆಳೆಗಾರರು ನಷ್ಟ ಅನುಭವಿಸಿದರೆ ಅಡಿಕೆ ಬೆಳೆಗಾರರಿಗೆ ಮಾತ್ರ ಲಾಕ್ ಡೌನ್ ವರದಾನವಾಗಿದೆ. ಲಾಕ್ ಡೌನ್ ನಿಂದಾಗಿ ಹೊರ ದೇಶಗಳಿಂದ ಬರುತ್ತಿದ್ದ ಅಕ್ರಮ ಅಡಿಕೆ ಆಮದಿಗೆ ಕಡಿವಾಣ ಬಿದ್ದಿದ್ದು, ಸ್ಥಳೀಯ ಅಡಿಕೆಗೆ ಭಾರೀ ಬೇಡಿಕೆ ಬಂದಿದೆ. ಅಡಿಕೆಯನ್ನು ಮಾರದೆ, ತಮಲ್ಲಿಯೇ ಉಳಿಸಿಕೊಂಡಿದ್ದ ಅಡಿಕೆ ಬೆಳೆಗಾರರಿಗೆ ಈಗ ಬಂಗಾರದ ಬೆಲೆ ಸಿಕ್ಕಿದೆ. ಅಡಿಕೆ ದರ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಇದೀಗ ಈ ವಾಣಿಜ್ಯ ಬೆಳೆ ಅಡಿಕೆಗೆ ಬಂಗಾರದ ಬೆಲೆ ಲಭಿಸುತ್ತಿದೆ. ಕಳೆದ ಐದು ವರುಷಗಳ ಬಳಿಕ ದಾಖಲೆಯ ಬೆಲೆ ಅಡಿಕೆ ಬೆಳೆಗಾರರಿಗೆ ಸಿಗುತ್ತಿದೆ. ಈ ಹಿಂದೆ ಕೆ.ಜಿ.ಗೆ 200ರಿಂದ 250 ರೂ.ಗೆ ಖರೀದಿಯಾಗುತ್ತಿದ್ದ ಅಡಿಕೆಗೆ ಈಗ 400 ರೂ. ಲಭಿಸುತ್ತಿದೆ. ಕ್ಯಾಂಪ್ಕೊ ಶಾಖೆಗಳಲ್ಲಿ ಹೊಸ ಅಡಿಕೆ ದರ 360 ರೂ.ಗೆ ಖರೀದಿ ಆಗಿದೆ. ಇದೇ ವೇಳೆ ಹಳೆ ಅಡಿಕೆಗೆ 390 ರೂ.ವರೆಗೆ ದರ ಏರಿದೆ. ಇತ್ತ ಖಾಸಗಿ ವಲಯದಲ್ಲಿ ಹಳೇ ಅಡಿಕೆಗೆ 400ರಿಂದ 410 ರೂ.ವರೆಗೂ ಖರೀದಿ ಆಗಿದೆ.ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗದ ಅಡಿಕೆ ದರ ಈ ಬಾರಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೋನಾ ಕಾಲದಲ್ಲೇ ಅಡಿಕೆಗೆ ಬಂಗಾರದ ಬೆಲೆ ಬಂದಿರುವುದು ಬೆಳೆಗಾರರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಕೊರೋನಾ ಲಾಕ್‌ಡೌನ್‌ ಬಳಿಕ ದೇಶಿ ಅಡಿಕೆ ಬೆಳೆಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಬಂದಿದೆ.

Also Read  ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ► ಪಟ್ಟಾಭಿಷೇಕದ ಸುವರ್ಣ ಮಹೋತ್ಸವ

 

 

error: Content is protected !!
Scroll to Top