ಭಾನುವಾರ ಲಾಕ್‌ಡೌನ್‌ ತೆರವು ➤ ರಸ್ತೆಗಿಳಿದ ವಾಹನಗಳು, ಎಂದಿನಂತೆ ಜನ ಜೀವನ

(ನ್ಯೂಸ್ ಕಡಬ) newskadaba.com ಕಡಬ, ಆ.02:  ಕೊರೋನಾ ನಿಯಂತ್ರಣದ ಭಾಗವಾಗಿ ಕಳೆದ ಎರಡು ತಿಂಗಳಿನಿಂದ ಪ್ರತಿ ಭಾನುವಾರ ನಗರವನ್ನು ಲಾಕ್‌ಡೌನ್ ಮಾಡಲಾಗುತ್ತಿತ್ತು. ಆದರೆ, ಇದೀಗ ಅನ್‌ಲಾಕ್‌-03 ಪ್ರಕ್ರಿಯೆ ಭಾಗವಾಗಿ ಭಾನುವಾರ ಲಾಕ್‌ಡೌನ್‌ ತೆರವು ಮಾಡಲಾಗಿದ್ದು, ಕಡಬ ,ಸುಬ್ರಹ್ಮಣ್ಯ ವಲಯಗಳಲ್ಲಿ  ವಾಹನಗಳು ಸಂಚಾರ ಆರಂಭವಾಗಿದೆ. ಅಲ್ಲದೆ, ಜನ ಜೀವನವೂ ಎಂದಿನಂತೆ ನಡೆಯುತ್ತಿದೆ.

ಭಾನುವಾರದ ಲಾಕ್‌ಡೌನ್ ಕಾರಣದಿಂದಾಗಿ ಬಸ್‌,  ಆಟೋ ಹಾಗೂ ಬೈಕ್‌ಗಳು ರಸ್ತೆಗೆ ಇಳಿಯುತ್ತಿರಲಿಲ್ಲ. ಆದರೆ, ಇಂದಿನಿಂದ ಎಲ್ಲಾ ಮಾರ್ಗಗಳಲ್ಲೂ ಭಾನುವಾರವೂ   ಬಸ್‌ಗಳು ಸಂಚರಿಸಲಿವೆ.  ದ್ವಿಚಕ್ರ ವಾಹನ ಸವಾರರು ಮಾತ್ರ ಯಾವುದೇ ಆತಂಕ ಇಲ್ಲದೆ ರಸ್ತೆಗೆ ಇಳಿದಿದ್ದಾರೆ. ಎಂದಿನಂತೆ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಅನ್‌ಲಾಕ್‌ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನೂ ತೆರವುಗೊಳಿಸಿದ್ದು, ಪೊಲೀಸರೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಜನರಲ್ಲಿನ ಆತಂಕವನ್ನು ದೂರ ಮಾಡಿದೆ. ಅಲ್ಲದೆ, ಇನ್ನೂ ಮುಂದಿನ ದಿನಗಳಲ್ಲೂ ಸಹ ಭಾನುವಾರ ಲಾಕ್‌ಡೌನ್‌ ಇರುವುದಿಲ್ಲ ಎಂದು ಸರ್ಕಾರ ಹೇಳಿರುವುದು ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ. ಈ ನಡುವೆ ಕಡಬದಲ್ಲಿ  ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದೆ. ಹೀಗಾಗಿ ಜನ ಎಂದಿನಂತೆ ಭಾನುವಾರವೂ ಸಹ ಮನೆಯಿಂದ ಹೊರಬಂದು ತಮಗೆ ಅಗತ್ಯವಾದ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ.

Also Read  ಮಂಗಳೂರು: ಭಾರತ ಬ್ಯಾಂಕ್ ಸ್ಥಾಪಕ ಜಯ ಸಿ. ಸುವರ್ಣ ನಿಧನ

error: Content is protected !!
Scroll to Top