ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ➤ ಬಾಲಕಿಯ ಪೋಷಕರ ಆಕ್ರೋಶಕ್ಕೆ ಬಲಿಯಾದ ಆರೋಪಿ

(ನ್ಯೂಸ್ ಕಡಬ) newskadaba.com ಮಂಡ್ಯ, ಆ.02:  ಅಪ್ರಾಪ್ತಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿಯೋರ್ವ ಪೋಷಕರ ಆಕ್ರೋಶಕ್ಕೆ ಬಲಿಯಾಗಿರುವ ಘಟನೆ ಮಂಡ್ಯ ತಾಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎಸ್.ಐ.ಕೋಡಿಹಳ್ಳಿ ನಿವಾಸಿ ಭೈರ (30) ಪೋಷಕರ ಆಕ್ರೋಶಕ್ಕೆ ಕೊಲೆಯಾದ ವ್ಯಕ್ತಿ.

 

ಮೂಲತಃ ಎಸ್.ಐ.ಕೋಡಿಹಳ್ಳಿಗ್ರಾಮದ ನಿವಾಸಿಯಾದ ಭೈರ ಅದೇ ಗ್ರಾಮದ 7 ವರ್ಷದ ಬಾಲಕಿಯನ್ನು ಜು.29ರಂದು ಮಧ್ಯಾಹ್ನ ಚಾಕೊಲೇಟ್ ಕೊಡಿಸುವ ನೆಪದಲ್ಲಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌಜನ್ಯ ನಡೆಸಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನ ಪೋಷಕರು ವಿಚಾರಿಸದಾಗ ವಿಷಯ ಬಯಲಾಗಿತ್ತು, ಇದರಿಂದ ಆಕ್ರೋಶಗೊಂಡ ಬಾಲಕಿಯರ ಪೋಷಕರು ಅದೇ ದಿನ ಸಂಜೆ ವೇಳೆಗೆ ಆತನನ್ನು ಹಿಡಿದು ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಬಾಲಕಿಯ ಪೋಷಕರ ಥಳಿತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಭೈರನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.

Also Read  ಬಂಟ್ವಾಳಕ್ಕೆ ತಲುಪಿದ ಎಸ್ಪಿ ಅಣ್ಣಾಮಲೈ

 

error: Content is protected !!
Scroll to Top