(ನ್ಯೂಸ್ ಕಡಬ) newskadaba.com.ಮಂಗಳೂರು,ಆ.2: ಶುಕ್ರವಾರ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಬೇಟಿ ನೀಡಿದ್ದರು ಈ ಸಂಧರ್ಭ ಅವರೊಂದಿಗೆ ಐವನ್ ಡಿಸೋಜಾ ಕೂಡ ಇದ್ದರೂ. ಶನಿವಾರ ಐವನ್ ಡಿಸೋಜಾ ಮತ್ತು ಅವರ ಪತ್ನಿ ಸ್ವಾಬ್ ಟೆಸ್ಟ್ ಮಾಡಿಸಿದ ವೇಳೆ ಕೊರೊನಾ ಪಾಸಿಟಿವ್ ಆಗಿತ್ತು ಇದರಿಂದ ಇದೀಗ ಕಾಂಗ್ರೆಸ್ ಮುಖಂಡರಿಗೆ ಆತಂಕ ಎದುರಾಗಿದೆ.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ದ.ಕ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತಿತರರ ಜತೆ ಬೆರೆತಿದ್ದರು. ಮಂಗಳೂರು ಬಿಷಪ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ನಿವಾಸಗಳಿಗೂ ಐವನ್ ಭೇಟಿ ನೀಡಿದ್ದರು. ಐವನ್ ಹತ್ತಿರವಿದ್ದ ಹಲವರು ಈಗ ಕ್ವಾರಂಟೈನ್ ಆಗುವಂತಾಗಿದೆ.
Also Read ಕಡಬ ತಾ. ಆಡಳಿತದ ವತಿಯಿಂದ ಸರಳವಾಗಿ ಸ್ವಾತಂತ್ರ್ಯೋತ್ಸ ಆಚರಣೆ ➤ ಧ್ವಜಾರೋಹಣ ನೆರವೇರಿಸಿದ ಕಡಬ ತಹಶೀಲ್ದಾರ್