ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತರ ದಂಡು

(ನ್ಯೂಸ್ ಕಡಬ) newskadaba.com ಕಡಬ, ಆ.02: ಕೊರೋನಾ ಕರಿಛಾಯೇ ದೇವಾಲಯಗಳಿಗೂ ತಟ್ಟಿದ್ದು, 3ರಿಂದ 4 ತಿಂಗಳುಗಳ ಕಾಲ ಭಕ್ತರಿಗೆ ದೇವಾಲಯದ ಪ್ರವೇಶಕ್ಕೆ ಅವಕಾಶವನ್ನು ಸರ್ಕಾರ ನಿರಾಕರಿಸಿತ್ತು. ಆದರೆ ಇದೀಗಾ ಲಾಕ್ ಡೌನ್ ಹೆಚ್ಚಿನ ಮಟ್ಟದಲ್ಲಿ ಸಡಿಲಗೊಂಡಿದ್ದು, ಪರಿಣಾಮ ಎಲ್ಲಾ ರೀತಿಯ ನಿರ್ಭಂದಗಳನ್ನ ಸಡಿಲಗೊಳಿಸಲಾಗಿದೆ.

 

ಹಾಗೂ ದೇವಾಲಯಗಳಿಗೂ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ.  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೂಡ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಕೋವಿಡ್ 19 ನಿಯಮಗಳಿಗನುಸಾರವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುಕ್ಕೆ ಸನ್ನಿದಿಗೆ ತೆರಳಿ ದೇವರ ದರ್ಶನ ಪಡೆದು ತೆರಳುತಿದ್ದಾರೆ. ಸರ್ಕಾರಿ ರಜೆ ಹಾಗೂ ಲಾಕ್ ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಭಕ್ತರ ಆಗಮನವೂ ಹೆಚ್ಚುಸತ್ತಿದೆ. ಸಾಮಾಜಿಕ ಅಂತರದ ಕಾಯ್ದುಕೊಂಡು ಭಕ್ತರು ದೇವರ ದರ್ಶರ ಪಡೆದುಕೊಂಡು ಪುನೀತರಾದರು.

Also Read  ಶಂಕಿತ ಉಗ್ರರ ಖಾತೆಗೆ ವಿದೇಶದಿಂದ ಹಣ ವರ್ಗಾವಣೆ - ಪೊಲೀಸ್ ಮೂಲಗಳಿಂದ ಮಹತ್ವದ ಮಾಹಿತಿ

 

error: Content is protected !!
Scroll to Top