(ನ್ಯೂಸ್ ಕಡಬ) newskadaba.com. ವಿಜಯಪುರ,ಆ.1: ಕೊರೊನಾ ಪಾಸಿಟಿವ್ ಆದ ಕುಂಟುಬಕ್ಕೆ ಅಕ್ಕಪಕ್ಕದ ನಿವಾಸಿಗಳ ಕಿರುಕುಲದಿಂದ ನೊಂದ ಕೊರೊನಾ ಸೋಂಕಿತನ ಕುಟುಂಬ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಿದೆ.
ಅಕ್ಕಪಕ್ಕದ ನಿವಾಸಿಗಳ ವರ್ತನೆಯಿಂದ ಬೇಸತ್ತ ಸೋಂಕಿತನ ಪತ್ನಿಯು ನಮ್ಮನ್ನೇಕೆ ಹೀಗೆ ಕೀಳಾಗಿ ಕಾಣ್ತೀರಿ? ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕೋದು ಸರಿಯಲ್ಲ. ನಾವೂ ಮನುಷ್ಯರೆ.. ಮಾನವೀಯತೆ ಮರೆಯದಿರಿ’ ಎಂದಿದ್ದಾರೆ. ಅಲ್ಲದೆ, ತಮ್ಮನ್ನು ಸ್ಥಳೀಯ ನಿವಾಸಿಗಳು ಕೀಳಾಗಿ ಕಾಣುತ್ತಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ, ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ಜಿಲ್ಲಾಧಿಕಾರಿಗೆ ಟ್ವೀಟ್ ಮೂಲಕ ಸೋಂಕಿತನ ಕುಟುಂಬಸ್ಥರು ದೂರು ನೀಡಿದ್ದಾರೆ.
ವಿಜಯಪುರದ ಚಾಲುಕ್ಯ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಆ ಮನೆಯ ಮೊದಲ ಮಹಡಿಯಲ್ಲಿ ಕುಟುಂಬಸ್ಥರು ಐಸೋಲೇಷನ್ಗೆ ಒಳಪಡಿಸಿದ್ದಾರೆ. ಕುಟುಂಬದ ಇತರ ಆರು ಜನರಿಗೆ ಕರೊನಾ ತಪಾಸಣೆಯ ವರದಿ ನೆಗೆಟಿವ್ ಬಂದಿದ್ದು, ಅವರೆಲ್ಲರೂ ಕೆಳ ಮನೆಯಲ್ಲಿ ವಾಸವಿದ್ದಾರೆ. ಆದರೂ ಈ ಮನೆಯವರಿಗೆ ಹಾಲು, ಪೇಪರ್ ಹಾಕಲು, ಮನೆ ಕೆಲಸಗಾರರಿಗೆ ಸುತ್ತಮುತ್ತಲಿನ ಜನರು ಅಡಚಣೆ ಮಾಡುತ್ತಿದ್ದಾರೆ. ಇದರಿಂದಾಗಿ ಸೋಂಕಿತನ ಕುಟುಂಬಸ್ಥರು ಕಂಗಾಲಾಗಿದ್ದಾರೆ.