(ನ್ಯೂಸ್ ಕಡಬ) newskadaba.com ಮಂಗಳೂರು: ಆ.01.,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 1315 ಪಾಸಿಟಿವ್ ಕೇಸ್ ದೃಢಪಟ್ಟಿದೆ. ವಾರದಲ್ಲಿ ಪ್ರತಿ ದಿನ ಸರಾಸರಿ 150 ಪಾಸಿಟಿವ್ ಪ್ರಕರಣ ಹಾಗೂ ಒಂದೇ ವಾರದ ಅವಧಿಯಲ್ಲಿ 50 ಮಂದಿ ಕೊರೊನಾ ಪೀಡಿತರಾಗಿ ಮೃತಪಟ್ಟಿದ್ದಾರೆ.
ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ ಜು.23 ರಿಂದ ಜು.29 ರವರೆಗೆ 1315 ಕೊರೊನಾ ದೃಢಪಟ್ಟಿದ್ದು ಈ ಪೈಕಿ 383 ಮಂದಿಗೆ ಕೊರೊನಾ ಹೇಗೆ ತಗುಲಿದೆ ಎಂದೇ ತಿಳಿದುಬಂದಿಲ್ಲ. ಸೋಂಕಿತರ ಪ್ರಮಾಣದಲ್ಲಿ ಮಾತ್ರವಲ್ಲದೆ, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿರುವುದು ನಿಜಕ್ಕೂ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆಮಾಡಿದೆ.