ಬೆಳ್ತಂಗಡಿ : ಆಶಾ ಕಾರ್ಯಕರ್ತೆ ಮೇಲೆ ಪತಿಯಿಂದಲೇ ಹಲ್ಲೆ

(ನ್ಯೂಸ್ ಕಡಬ) newskadaba.com  ಬೆಳ್ತಂಗಡಿ, ಆ.01: ಕೊವೀಡ್ -19 ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಆದೇಶದಂತೆ ಸರ್ವೆಗೆ ಹೋಗುತ್ತಿದ್ದ ಆಶಾ ಕಾರ್ಯಕರ್ತೆ ಯ ಮೇಲೆ ಅವರ ಪತಿಯೇ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಪೇಲತ್ತಳಿಕೆಯಲ್ಲಿ ನಡೆದಿದೆ.


ಪುದುವೆಟ್ಟು ಗ್ರಾಮದ ಅರಸೋಲಿಗೆ ನೆರೋಳುಪಳಿಕೆ ನಿವಾಸಿ ಆಶಾ ಕಾರ್ಯಕರ್ತೆ ಶ್ರೀ ಮತಿ ಭವಾನಿ ಹಲ್ಲೆಗೊಳಗಾಗಿದ್ದು, ತಲೆಗೆ ಗಂಭೀರಾ ಗಾಯಗೊಂಡು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳಿಯ ಗ್ರಾಮದ ಗೇರು ಕಟ್ಟೆ ಬಾಕಿಮಾರು ನಿವಾಸಿ ಸುರೇಶ್ ಸುರೇಶ್ ಹಲ್ಲೆ ನಡೆಸಿದವರೆಂದು ತಿಳಿದು ಬಂದಿದೆ. ಹಲ್ಲೆ ನಡೆಸಿರುವ ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  Google, ಫೋನ್ ಪೇ ಮತ್ತು ಪೇಟಿಎಂ ಬಳಕೆದಾರರಿಗೆ ಗುಡ್ ನ್ಯೂಸ್ - ವಹಿವಾಟಿನ ಮಿತಿ ಹೆಚ್ಚಿಸಿದ RBI

 

error: Content is protected !!
Scroll to Top