ಮಡಿಕೇರಿಯಲ್ಲಿ ಅಕ್ಟೀವಾ – ಕಾರು ನಡುವೆ ಅಪಘಾತ ➤ ಅಂಬಿಕಾ ವಿದ್ಯಾರ್ಥಿ ಶ್ರೇಯಸ್ ಮೃತ್ಯು

(ನ್ಯೂಸ್ ಕಡಬ) newskadaba.com ಕೊಡಗು, ಅ.01: ಸಿಇಟಿ ಪರೀಕ್ಷೆ ಬರೆದು ವಾಪಾಸ್ ಆಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಪುತ್ತೂರು ಅಂಬಿಕಾ ವಿದ್ಯಾಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿ ಮೃತಪಟ್ಟ ಘಟನೆ ಶುಕ್ರವಾರ ಮಡಿಕೇರಿ ನಗರದ ಚೈನ್ ಗೇಟ್ ಬಳಿ ನಡೆದಿದೆ.

 

 

ಪುತ್ತೂರು ಪ್ರತಿಷ್ಠಿತ ಅಂಬಿಕಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶ್ರೇಯಸ್, ಕೋವಿಡ್ ಕಾರಣದಿಂದ ಮಡಿಕೇರಿಯಲ್ಲೇ ಸಿಇಟಿ ಪರೀಕ್ಷೆ ಬರೆದು ತನ್ನ ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣದ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಶ್ರೇಯಸ್ ಜೊತೆಗಿದ್ದ ಮತ್ತೊಬ್ಬ ವಿದ್ಯಾರ್ಥಿ ಶಿಬಿನ್ ಗೆ ಗಂಭೀರ ಗಾಯವಾಗಿದೆ. ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದ ಶ್ರೇಯಸ್ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದ. ತನ್ನ ಕಿರಿಯ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಮೃತ ಶ್ರೇಯಸ್ ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿ ಶ್ರೇಯಸ್ ನಿಧನಕ್ಕೆ ಅಂಬಿಕಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Also Read  ಮಂಗಳೂರು: ವಾಹನಗಳಲ್ಲಿ ಪ್ರಖರ ಎಲ್ಐಡಿ ಲೈಟ್ ಬಳಕೆ 1170 ಪ್ರಕರಣ ದಾಖಲು, 5.86 ಲಕ್ಷ ರೂ. ದಂಡ.!

 

 

error: Content is protected !!
Scroll to Top