ಕಡಬದಲ್ಲಿ 17 ಮಂದಿಯಲ್ಲಿ ಕೊರೋನಾ ದೃಢ ➤ ತಾಲೂಕು ಆರೋಗ್ಯ ಇಲಾಖಾ ವರದಿ



(ನ್ಯೂಸ್ ಕಡಬ) newskadaba.com ಪುತ್ತೂರು, ಜು.31: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆ.1ರಂದು ತಾಲೂಕು ಆರೋಗ್ಯ ಇಲಾಖೆಯ ವರದಿಯಂತೆ 17 ಮಂದಿಯಲ್ಲಿ ಕೊರೋನಾ ದೃಢಪಟ್ಟಿರುವ ಕುರಿತು ವರದಿಯಾಗಿದೆ. ಜು.31ಕ್ಕೆ ಕೋಡಿಂಬಾಡಿ ಮತ್ತು ನೆಲ್ಯಾಡಿಯಲ್ಲಿ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡಲಾಗಿತ್ತು. ಆ ಪರೀಕ್ಷೆಯಲ್ಲಿ ಕೊರೋನಾ ದೃಢಗೊಂಡವರ ಪಟ್ಟಿ ಸೇರಿ ಮತ್ತು ಸರಕಾರಿ ಹಾಗೂ ಮಂಗಳೂರು ಆಸ್ಪತ್ರೆಯಲ್ಲಿ ದೃಢಗೊಂಡ ಕೊರೋನಾ ಪ್ರಕರಣಗಳ ಮಾಹಿತಿ ನೀಡಲಾಗಿದೆ. ಬೆಳ್ಳಿಪ್ಪಾಡಿ ಗ್ರಾಮದ ಒಂದೇ ಮನೆಯ 48 ವರ್ಷದ ವ್ಯಕ್ತಿ, 38 ವರ್ಷದ ಮಹಿಳೆ, ಕೊಡಿಪ್ಪಾಡಿ ಗ್ರಾಮದ ಒಂದೇ ಮನೆಯ 67 ವರ್ಷದ ವ್ಯಕ್ತಿ, 30 ಮತ್ತು 31 ವರ್ಷದ ಇಬ್ಬರು ಯುವಕರು, ದರ್ಬೆಯ ಒಂದೇ ಮನೆಯ 51 ವರ್ಷ ಹಾಗೂ 56 ವರ್ಷದ ವ್ಯಕ್ತಿಗಳು, ನೆಹರೂನಗರದ 42 ವರ್ಷದ ಮಹಿಳೆ, ಕುಂಬ್ರ ನಿವಾಸಿ 50 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.





 

 

 

ಕೌಕ್ರಾಡಿ ಗ್ರಾಮದ ಒಂದೇ ಮನೆಯ 31ವರ್ಷದ ಯುವಕ, 19 ವರ್ಷದ ಯುವತಿ, 29 ವರ್ಷದ ಮಹಿಳೆ, 22 ವರ್ಷದ ಯುವಕ, 20 ವರ್ಷದ ಯುವಕ, 38 ವರ್ಷದ ವ್ಯಕ್ತಿ, 65 ವರ್ಷದ ವ್ಯಕ್ತಿ, ಕಡಬದ 41 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ.






 

 

error: Content is protected !!
Scroll to Top