ಅಕ್ರಮ ಗೋ ಸಾಗಾಟ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.31:  ದಿನದಿಂದ ದಿನಕ್ಕೆ ದಕ್ಷಿಣ ಕನ್ನಡದಲ್ಲಿ ಗೋ ಕಳ್ಳರ ಹಾವಳಿ ಹೆಚ್ಚಾಗುತ್ತಲೇಯಿದೆ. ಗುರುವಾರವೂ ಬೆಳ್ತಂಗಡಿ ಪೋಲಿಸರು ಗೋ ಕಳ್ಳನೊಬ್ಬನನ್ನು ಬಂಧಿಸಿ ಗೋವುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇದು ವಾರದಲ್ಲಾದ ನಾಲ್ಕನೇ ಪ್ರಕರಣವಾಗಿದೆ .ನಾವುರು ಗ್ರಾಮದ ಕೈಕಂಬ ಮನೆಯ ರಫೀಕ್(36) ಎಂಬಾತನೇ ಆರೋಪಿಯಾಗಿದ್ದಾನೆ.

 

 ಗುರುವಾರ ಬೆಳಿಗ್ಗೆ ಬೆದ್ರಬೆಟ್ಟು ಎಂಬಲ್ಲಿ ಯಾವುದೇ ಪರವಾನಿಗೆ  ಪತ್ರಗಳನ್ನು ಹೊಂದದೆ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಪಿಕಪ್‌ ವಾಹನದಲ್ಲಿ ತುಂಬಿಸಿ ಕಿಲ್ಲೂರು ಕಡೆಯಿಂದ ಪಿಕಪ್‌ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿತನನ್ನು ವಶಕ್ಕೆ ಪಡೆದು ಆರೋಪಿತನು ಸಾಗಾಟ ಮಾಡುತ್ತಿದ್ದ ಹಸು ಹಾಗೂ  ಹೋರಿ ಕರುವನ್ನ ಮತ್ತು ಸಾಗಾಟಕ್ಕೆ ಉಪಯೋಗಿಸಿದ ಪಿಕಪ್‌ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಜಾನುವಾರು ಹಾಗೂ ಪಿಕಪ್‌ನ ಒಟ್ಟು ಮೌಲ್ಯ ರೂ 5,14,000/- ಆಗಿದೆ ಎಂದು ಅಂದಾಜಿಸಲಾಗಿದೆ.

Also Read  ಅನಾಥಾಶ್ರಮದಲ್ಲಿ ವೃದ್ದೆ ನಿಧನ ➤ ಸಂಬಂಧಿಕರ ಪತ್ತೆಗೆ ಮನವಿ

 

 

 

 

error: Content is protected !!
Scroll to Top