ಆನ್‌ಲೈನ್‌ ಮೂಲಕ ಮನೆ ಮನೆಗೆ ಮಧ್ಯ ಪೂರೈಕೆಗೆ ಸರ್ಕಾರ ಚಿಂತನೆ ➤ ಆಗಸ್ಟ್‌ನಿಂದ ಹೋಂ ಡೆಲಿವರಿ ಸೇವೆ ಜಾರಿ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು: ಜು.30., ಕರ್ನಾಟಕ ಸರಕಾರ ಮದ್ಯವನ್ನು ಆನ್‌ಲೈನ್‌ ಮೂಲಕ ಮನೆ ಮನೆಗೆ ಪೂರೈಕೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಉದ್ಯಮಕ್ಕೆ ಸಂಬಂಧಿಸಿದವರ ಜೊತೆ ಸೋಮವಾರ ಸಮಾಲೋಚನೆ ಹಮ್ಮಿಕೊಂಡಿದೆ.

ಆರಂಭದಲ್ಲಿ ಬೆಂಗಳೂರಿನಲ್ಲಿ ಮೊಬೈಲ್‌ ಆಪ್‌ ಮೂಲಕ ಹೋಮ್‌ ಡೆಲಿವರಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದ್ದು, ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ಚಿಲ್ಲರೆ ಮಾರಾಟ ಮಳಿಗೆ ಮತ್ತು ಎಂಎಸ್‌ಐಎಲ್‌ ಮಳಿಗೆಗಳ ಮೂಲಕ ಮನೆ ಮನೆಗೆ ಪೂರೈಕೆ ಮಾಡುವ ಬಗ್ಗೆ ಅಲೋಚಿಸಿದೆ.


ಉದ್ಯಮಕ್ಕೆ ಸಂಬಂಧಿಸಿದ ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಬರೆದು ಕಳಿಹಿಸುವಂತೆ ಅಬಕಾರಿ ಆಯುಕ್ತ ಎಂ ಲೋಕೇಶ್‌ ಹೇಳಿದ್ದಾರೆ. ಒಂದೊಮ್ಮೆ ಎಲ್ಲರಿಂದಲೂ ಸಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾದರೆ ಇದೇ ಆಗಸ್ಟ್‌ನಿಂದ ಈ ಸೇವೆಯನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಕೇರಳ ಸೇರಿ ಆರು ರಾಜ್ಯಗಳಲ್ಲಿ ಮನೆ ಮನೆಗೆ ಮದ್ಯ ಪೂರೈಕೆ ಜಾರಿಯಲ್ಲಿದೆ.


ಆರಂಭದಲ್ಲಿ ಬೆಂಗಳೂರಿನಲ್ಲಿ ಮೊಬೈಲ್‌ ಆಪ್‌ ಮೂಲಕ ಹೋಮ್‌ ಡೆಲಿವರಿಗೆ ಅವಕಾಶ ನೀಡಲು ಉದ್ದೇಶಿಸಿದ್ದು, ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ಚಿಲ್ಲರೆ ಮಾರಾಟ ಮಳಿಗೆ ಮತ್ತು ಎಂಎಸ್‌ಐಎಲ್‌ ಮಳಿಗೆಗಳ ಮೂಲಕ ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ.
ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯಗಳನ್ನು ಬರೆದು ಕಳುಹಿಸುವಂತೆ ಅಬಕಾರಿ ಆಯುಕ್ತ ಎಂ.ಲೋಕೇಶ್‌ ತಿಳಿಸಿದ್ದಾರೆ. ಎಲ್ಲರಿಂದಲೂ ಸಕರಾತ್ಮಕವಾದ ಅಭಿಪ್ರಾಯ ವ್ಯಕ್ತವಾದಲ್ಲಿ, ಈ ಸೇವೆಯನ್ನು ಇದೇ ಆಗಸ್ಟ್‌ನಿಂದ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರ ಸೇರಿದಂತೆ ಕೇರಳ ಹಾಗು ಆರು ರಾಜ್ಯಗಳಲ್ಲಿ ಈಗಾಗಲೇ ಈ ಸೇವೆ ಜಾರಿಯಲ್ಲಿದೆ.

Also Read  ಸಬ್ ಇನ್ಸ್ ಪೆಕ್ಟರ್ ಮಗಳ ಶವ ಸೂಟ್ಕೇಸಲ್ಲಿ ಪತ್ತೆ ►ಹತ್ಯೆ ಮಾಡಿದವರು ಯಾರು ಗೊತ್ತೆ...???


ಕೊರೊನಾದಿಂದ ಬಾರ್‌ ಹಾಗೂ ರೆಸ್ಟೋರೆಂಟ್ ಮಾಲೀಕರು ನಷ್ಟ ಅನುಭವಿಸಿದ್ದಾರೆ. ಈ ಕಾರಣದಿಂದ ಅವರು ಇನ್ನೂ ತೊಂದರೆಗೆ ಒಳಗಾಗಲಿದ್ದಾರೆ ಎಂದು ರಾಜ್ಯ ವೈನ್‌ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಗೋವಿಂದರಾಜ್‌ ಹೆಗ್ಡೆ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಹೋಂ ಡೆಲಿವರಿ ಸೇವೆ ಜಾರಿಗೆ ಬಂದರೆ ಮದ್ಯದಂಗಡಿಗಳ ಮುಂದೆ ಗುಂಪುಗೂಡುವುದು ನಿಲ್ಲುತ್ತದೆ. ಅಲ್ಲದೇ, ಕುಡಿದು ವಾಹನ ಚಲಾಯಿಸುವುದು, ಅಪಘಾತದ ಪ್ರಕರಣಗಳು ತಪ್ಪುತ್ತವೆ. ಇವೆಲ್ಲದರೊಂದಿಗೆ ಸರ್ಕಾರಕ್ಕೆ ಅಧಿಕ ಆದಾಯವೂ ಬರುತ್ತದೆ. ಕೊರೊನಾದ ಈ ಪರಿಸ್ಥಿತಿಯಲ್ಲಿ ಜನರು ಸುರಕ್ಷಿತವಾಗಿರಲೂ ಕೂಡಾ ಇದು ನೆರವಾಗುತ್ತದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾದಿಂದ ಈಗಾಗಲೇ ಸರಕಾರದ ಆದಾಯದಲ್ಲಿ ಭಾರಿ ಕುಸಿತ ಕಂಡಿದ್ದು, ಅಬಕಾರಿಯ ಮೂಲಕ ಆದಾಯ ಗಳಿಸುವಲ್ಲಿ ಸರ್ಕಾರ ಮುಂದಾಗಿದ್ದು, ಆನ್‌ಲೈನ್‌ ಸೇವೆ ಇದಕ್ಕೆ ಸಹಾಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಅಬಕಾರಿ ಇಲಾಖೆ ಇದೆ.

error: Content is protected !!
Scroll to Top