ಕೊರೋನಾ ಆತಂಕದ ನಡುವೆಯೂ ವರಮಹಾಲಕ್ಷ್ಮಿ ಪೂಜೆಗೆ ಖರೀದಿ ಜೋರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.30: ಕೊರೊನಾ ಸಂಕಷ್ಟದ ನಡುವೆ ವರಮಹಾಲಕ್ಷ್ಮಿ ಆಚರಣೆಗೆ ವಿವಿಧ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.ದೇಶದ ದೊಡ್ಡ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ಸಿಲಿಕಾನ್ ಸಿಟಿ ಜನ ಭರದ ಸಿದ್ಧತೆ ನಡೆಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಹಲವು ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆಯಾದರೂ ನಗರದ ವಿವಿಧೆಡೆ ಇರುವ ಗಾಂಧಿಬಜಾರ್ ಮಾರುಕಟ್ಟೆ, ಲಾಲ್‍ಬಾಗ್, ಗಣೇಶ ದೇವಾಲಯ, ಹೂವಿನ ಮಾರುಕಟ್ಟೆ, ಮೈಸೂರು ರಸ್ತೆ, ಫ್ಲೈ ಓವರ್ ಕೆಳಭಾಗದ ಮಾರುಕಟ್ಟೆ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಶಿವಾಜಿನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಖರೀದಿ  ಜೋರಾಗಿತ್ತು.

 

Also Read  ಸೆ.12ರಂದು ಕಡಬದಲ್ಲಿ ಡಿ.ಕೆ.ಶಿ ಬಂಧನದ ವಿರುದ್ಧ ಬೃಹತ್ ಪ್ರತಿಭಟನೆ ➤ತಹಸೀಲ್ದಾರ ಮುಖಾಂತರ ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಮನವಿ.

 

ಹೂವು, ಬಾಳೆಕಂದು, ಮಾವಿನ ಎಲೆ ಜತೆಗೆ ಹಣ್ಣುಗಳ ಖರೀದಿ ಮಾಡಲು ಜನ ಮುಂದಾಗಿದ್ದರು. ಮಾರುಕಟ್ಟೆ ಪ್ರದೇಶದ ಕೆಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರ ಸಂಖ್ಯೆ ಕಡಿಮೆ ಇದ್ದರೂ ವಸ್ತುಗಳ ಬೆಲೆ ಮಾತ್ರ ಗಗನಮುಖಿಯಾಗಿಯೇ ಇತ್ತು.ಹಣ್ಣು, ಹೂವು, ತರಕಾರಿ ಬೆಲೆ ದುಪ್ಪಟ್ಟಾಗಿತ್ತು. ಹಬ್ಬ ಆಚರಣೆ ಹಿಂದಿನ ವರ್ಷದಷ್ಟು ಸಡಗರ-ಸಂಭ್ರಮವಿಲ್ಲದಿದ್ದರೂ ಸರಳ ಹಾಗೂ ಸಂಪ್ರದಾಯದಂತೆ ಆಚರಿಸಲು ಜನ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.ನಾಳೆ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಅವಕಾಶವಿಲ್ಲ. ಭಕ್ತರ ದರ್ಶನಕ್ಕೆ ಮಾತ್ರ ನೀಡಲಾಗಿದೆ.

 

 

error: Content is protected !!
Scroll to Top