ಮಂಗಳೂರು:ನಿಲ್ಲಿಸಿದ್ದ ಕಾರಿನಿಂದ ಹಣ ಕದ್ದ ಕಳ್ಳನ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ: ಜು.30., ಮಂಗಳೂರಿನಲ್ಲಿ ನಿಲ್ಲಿಸಿದ್ದ ಕಾರಿನಿಂದ ಹಣ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲಾ ಡಿಸಿಐಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.


ಬಂಧಿತ ವ್ಯಕ್ತಿಯನ್ನು ಮೂಡಬಿದ್ರೆ ತೋಡಾರು ನಿವಾಸಿ ಗುರುಪ್ರಸಾದ್ (32) ಎಂದು ಗುರುತಿಸಲಾಗಿದೆ,
ಮಂಗಳೂರಿನ ಕ್ಲಾಕ್ ಟವರ್ ಬಳಿಯ ನಿಲ್ಲಿಸಿದ್ದ ಕಾರಿನಿಂದ ನಗದು ಹಣ ಕಳ್ಳತನ ಮಾಡಿದ್ದು ಉಡುಪಿ ಡಿಸಿಐಬಿ ಪೋಲೀಸ್ ಇನ್ಸ್ ಪೆಕ್ಟರ್ ಮಂಜಪ್ಪ ಡಿಆರ್. ರವರು ಖಚಿತ ಮಾಹಿತಿ ಮೇರೆಗೆ ಉಡುಪಿ ಡಿಸಿಐಬಿ ಸಿಬ್ಬಂದಿಯವರೊಂದಿಗೆ ಉಡುಪಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದು ಬಂಧಿತನಿಂದ ಕಳವು ಮಾಡಿದ್ದ ನಗದು ಹಣ 2,03,700/- ರೂಪಾಯಿ ಹಾಗೂ ಕಳವು ಮಾಡಿದ ಹಣದಲ್ಲಿ 8,000/- ರೂಪಾಯಿಗೆ ಖರೀದಿಸಿದ ಮೊಬೈಲ್ ಫೋನ್ ಸ್ವಾಧೀನಪಡಿಸಿಕೊಂಡು ಉಡುಪಿ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ. ಈತನು ಕಳವು ಮಾಡಿದ್ದ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Also Read  ಅಡ್ಡೂರು ಸೇತುವೆ ಪರಿಶೀಲನೆ- ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ

ಆರೋಪಿ ಗುರುಪ್ರಸಾದ್ 2015 ನೇ ಇಸವಿಯಲ್ಲಿ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀಗ ಹಾಕಿದ್ದ ಮನೆಯ ಹೆಂಚು ತೆಗೆದು ಒಳ ಪ್ರವೇಶಿಸಿ ಕಳ್ಳತನ ಮಾಡಿದ್ದು, ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿ ಕೊಂಡಿದ್ದ.


ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಎನ್. ಐ.ಸಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ ಕೆ.ಎಸ್.ಪಿ.ಎಸ್, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿಆರ್.ಜೈಶಂಕರ್, ಉಡುಪಿ ಡಿಸಿಐಬಿ ಪೋಲೀಸ್ ಇನ್ಸ್ ಪೆಕ್ಟರ್ ಮಂಜಪ್ಪ ಡಿಆರ್., ಡಿ.ಸಿ.ಐ.ಐ ಘಟಕದ ಎಎಸ್ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ರಾಮು ಹೆಗ್ಗೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ರಾಜ್ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ರವರು ಕಾರ್ಯಾಚರಣೆಯಲ್ಲಿ ಸಹಕರಿಸುತ್ತಾರೆ.

error: Content is protected !!