ಮಂಗಳೂರು: ಸೆ.1 ರಿಂದ ಮೀನುಗಾರಿಕೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು ಜು.30: ಅಗಸ್ಟ್ 1 ರಂದು ಪ್ರಾರಂಭವಾಗಬೇಕಿದ್ದ ಮೀನುಗಾರಿಕಾ ಋತುವನ್ನು ಕೊರೊನಾದಿಂದಾಗಿ ಈ ಬಾರಿ ಕರಾವಳಿಯಲ್ಲಿ ಸೆಪ್ಟೆಂಬರ್‌ 1 ರಿಂದ ಆರಂಭಿಸಲು ಮೀನುಗಾರಿಕಾ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರತಿ ವರ್ಷದಂತೆ ಮೀನುಗಾರಿಕೆಯ ನಿಷೇಧದ ಅವಧಿ ಜುಲೈ 31 ಕ್ಕೆ ಮುಕ್ತಾಯವಾಗಿ, ಆಗಸ್ಟ್ 1ರಿಂದ ಆರಂಭವಾಗಬೇಕಾಗಿತ್ತು. ಕೊರೊನಾದ ಸಂಕಷ್ಟದಿಂದ ಮತ್ತೆ ಅಗಸ್ಟ್ 1 ರಿಂದ ಪ್ರಾರಂಭ ಕಷ್ಟ ಸಾಧ್ಯವಾದ ಹಿನ್ನಲೆ ಈ ನಿರ್ಧಾರಕ್ಕೆ ಬರಲಾಗಿದೆ.

 

 

ಈ ಕುರಿತಂತೆ ವಿವಿಧ ಸಂಘಟನೆಗಳ ಸಭೆ ಕರೆದು, ಮೀನುಗಾರಿಕೆ ಪ್ರಾರಂಭಿಸುವ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಅನೇಕ ವಿಷಯಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದೇ ಇರುವುದರಿಂದ ಸೆಪ್ಟೆಂಬರ್‌ 1 ರವರೆಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಟ್ರಾಲ್‌ ಬೋಟ್‌ ಮಾಲೀಕರ ಸಂಘದ ಅಧ್ಯಕ್ಷ ನಿತಿನ್‌ಕುಮಾರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 1,200 ಮೀನುಗಾರಿಕೆ ಬೋಟ್‌ಗಳಿದ್ದು, ಶೇ 75 ರಷ್ಟು ಕಾರ್ಮಿಕರು ತಮಿಳುನಾಡು, ಆಂಧ್ರಪ್ರದೇಶ, ಜಾರ್ಖಂಡ, ಒಡಿಶಾ ರಾಜ್ಯದವರು. ಮೀನುಗಾರಿಕೆ ಆರಂಭಿಸಲು ಈ ಕಾರ್ಮಿಕರು ಮಂಗಳೂರಿಗೆ ಬರಬೇಕಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಕೊರೊನಾ ನಡುವೆ ಸುರಕ್ಷಿತ ಮೀನುಗಾರಿಕೆ ನಡೆಸಲು ಅಗತ್ಯ ಮಾರ್ಗಸೂಚಿಗಳನ್ನು ತಯಾರಿಸಬೇಕಾಗಿದೆ. ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

Also Read  ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್

 

error: Content is protected !!
Scroll to Top