ಧರ್ಮಸ್ಥಳ :ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡಣೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು.30:  ಕೋವಿಡ್ -19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಚೆನ್ನೈನ ಡಾ. ಕಾರ್ತಿಕ್ ನಾರಾಯಣ್ ಮತ್ತು ಡಾ. ಸೆಂಥಿಲ್ ಕುಮಾರ್ ತಂಡದಿಂದ ಸಾವಯವ ಸ್ಯಾನಿಟೈಸರ್ ರೂಪಿಸಿದ್ದು, ಧರ್ಮಸ್ಥಳದಲ್ಲಿ ಇಂದು ಡ್ರೋನ್ ಮೂಲಕ ಸ್ಯಾನಿಟೈಸರ್ ಸಿಂಪಡಿಸಿ ಪ್ರಾತ್ಯಕ್ಷಿತೆ ನಡೆಸಲಾಯಿತು.

 

ಚೆನ್ನೈ ನ ಸುಗಾರಾಧನಾ ತಂಡದಿಂದ ಕರ್ನಾಟಕದಲ್ಲಿ ಒಂದು ಸಾವಿರ ಗ್ರಾಮಗಳನ್ನು ದತ್ತು ಪಡೆದು ಒಂದು ಸಾವಿರ ಯುವಜನರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಕೌಶಲಾಭಿವೃದ್ಧಿಯ ಮಾರ್ಗದರ್ಶನ ನೀಡಲಾಗುತ್ತಿದೆ.ಅಣ್ಣಾ ವಿಶ್ವವಿದ್ಯಾಲಯದ ಎಂಐಟಿಯಲ್ಲಿ ನಿರ್ಮಿಸಲಾದ ಬ್ಯಾಟರಿ ಚಾಲಿತ ಡ್ರೋನ್ ಬಳಸಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈ ಸಂದರ್ಭ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು.

Also Read  ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಸಿಗಾಳಿ ಸಾಧ್ಯತೆ

 

 

 

error: Content is protected !!
Scroll to Top