ಉಪ್ಪಿನಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳ್ಳತನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಸೆ.13, ಇಲ್ಲಿನ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಕಳ್ಳರು ನುಗ್ಗಿ ಸುಮಾರು.36 ಸಾವಿರ ರುಪಾಯಿ ನಗದು ದೋಚಿ ಪರಾರಿಯಾದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಶಾಲಾ ಪ್ರಾಚಾರ್ಯರ ಕೊಠಡಿ ಹಾಗೂ ಶಿಕ್ಷಕರ ಮತ್ತು ಸಿಬಂದಿಗಳ ಕೊಠಡಿ ಸೇರಿದಂತೆ ಕಚೇರಿಗಳ ಬೀಗಗಳನ್ನು ತುಂಡರಿಸಿ ಅಲ್ಲಿದ್ದ ಸುಮಾರು.36 ಸಾವಿರ ರೂ.ಗಳನ್ನು ದೋಚಿದ್ದಾರೆ.

Also Read  ಕಡಬ ಪ್ರಾ.ಕೃ.ಪ.ಸ.ಸಂ ದ ನೂತನ ಅಧಕ್ಷರಾಗಿ ರಮೇಶ್ ಕಲ್ಪುರೆ ಅಧಿಕಾರ ಸ್ವೀಕಾರ:

ಸುದ್ದಿ ತಿಳಿದು ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಶ್ವಾನದಳ ಹಾಗೂ ಬೆರಳು ತಜ್ಞರು ಬಂದು ತಪಾಸಣೆ ನಡೆಸಿದ್ದಾರೆ.

error: Content is protected !!
Scroll to Top