ಕಾರ್ಕಳ : ‘ಆಟೋ ಪ್ಲೀಸ್’ ಉಚಿತ ಅಪ್ಲಿಕೇಷನ್

(ನ್ಯೂಸ್ ಕಡಬ) newskadaba.com ಕಾರ್ಕಳ, ಜು.29:  ತಾಲ್ಲೂಕಿನ ನಿಟ್ಟೆ ಎನ್.ಎಂ.ಎ.ಎಂ ತಾಂತ್ರಿಕ ಕಾಲೇಜಿನ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ‘ಆಟೋ ಪ್ಲೀಸ್’ ಎಂಬ ವಿನೂತನ ಉಚಿತ ಅಪ್ಲಿಕೇಷನ್‌ ಅನ್ನು ಪರಿಚಯಿಸಲಾಗಿದೆ.

ಈ ಅಪ್ಲಿಕೇಶನ್‌ನ ಮೂಲಕ ಸಾರ್ವಜನಿಕರು ತಮ್ಮ ಸಮೀಪದ ರಿಕ್ಷಾ ನಿಲ್ದಾಣವನ್ನು ಅಯ್ಕೆ ಮಾಡಿದಲ್ಲಿ, ಅಲ್ಲಿ ಸಂಚಾರಕ್ಕೆ ಲಭ್ಯವಿರುವ ರಿಕ್ಷಾಗಳ ಪಟ್ಟಿ ದೊರೆಯಲಿದೆ. ಚಾಲಕನ ಹೆಸರು, ಭಾವಚಿತ್ರ, ಚಾಲನಾ ಪರವಾನಗಿ ಮುಂತಾದ ವಿವರಗಳನ್ನು ಪರಿಶೀಲಿಸಬಹುದಾಗಿದೆ. ಪಟ್ಟಿಯಲ್ಲಿ ಇರುವ ಚಾಲಕರ ಮಾಹಿತಿಯನ್ನು ಗಮನಿಸಿ ಆ ರಿಕ್ಷಾ ಚಾಲಕನಿಗೆ ಕರೆಮಾಡುವ ಸೌಲಭ್ಯವನ್ನೂ ಇದರಲ್ಲಿ ನೀಡಲಾಗಿದೆ. ಜನರು ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಬೇಕಾಗಿಲ್ಲ. ಇದು ಗ್ರಾಹಕಸ್ನೇಹಿ ಅಪ್ಲಿಕೇಷನ್ ಆಗಿದ್ದು, ಉಚಿತವಾಗಿ ದೊರೆಯಲಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.ಕಾಲೇಜಿನ ಕಂಪ್ಯೂಟರ್‌ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ವೇಣುಗೋಪಾಲ ಪಿ.ಎಸ್. ಅವರ ಮಾರ್ಗದರ್ಶನದಲ್ಲಿ ಬಿ.ಇ. ಪದವಿ ವಿದ್ಯಾರ್ಥಿಗಳಾದ ಚಿಂತನ್ ಹಾಗೂ ಧ್ವನಿತ್ ವಿನ್ಯಾಸಗೊಳಿಸಿದ್ದಾರೆ. ಕಾರ್ಕಳ ಹಾಗೂ ನಿಟ್ಟೆ ಪರಿಸರದಲ್ಲಿ ಅತಿಶೀಘ್ರದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಿಳಿಸಿದ್ದಾರೆ.

Also Read  ತಂಡದಿಂದ ಚೂರಿ ಇರಿತ ➤ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

 

 

error: Content is protected !!
Scroll to Top