ಸಿಸಿಟಿವಿಯನ್ನು ಕಿತ್ತೆಸೆದು ಬ್ಯಾಂಕ್ ದರೋಡೆಗೆ ವಿಫಲಯತ್ನ…!!!

(ನ್ಯೂಸ್ ಕಡಬ) newskadaba.com ಮಡಿಕೇರಿ: ಜು.29., ಕೊರೋನಾ ಸಂಕಷ್ಟ ಹಿನ್ನಲೆ ಖದೀಮರ ತಂಡವೊಂದು ಬ್ಯಾಂಕ್ ದರೋಡೆಗೆ ಪ್ರಯತ್ನಿಸಿದ ಘಟನೆ ಮಡಿಕೇರಿ ಸಮೀಪದ ಮಕ್ಕಂದೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ತಡರಾತ್ರಿ ನಡೆದಿದೆ. ಬ್ಯಾಂಕ್ ಗೋಡೆಯನ್ನು ಮಾತ್ರ ಒಡೆದಿರುವ ದರೋಡೆಕೋರರು ಸ್ರ್ಟಾಂಗ್ ರೂಮ್‍ಗೆ ಪ್ರವೇಶಿಸಲು ವಿಫಲರಾಗಿದ್ದಾರೆ.


ಪೂರ್ವ ಯೋಜಿತವಾಗಿ ಸಂಚು ರೂಪಿಸಿರುವ ಖದೀಮರು, ಮೊದಲು ಬ್ಯಾಂಕಿಗೆ ಕಲ್ಪಿಸುವ ವಿದ್ಯುತ್ ತಂತಿಯನ್ನು ಕತ್ತರಿಸಿ ಸಿಸಿಟಿವಿಯನ್ನು ಕಿತ್ತೆಸೆದು ಬಳಿಕ ಕಬ್ಬಿಣದ ಹಾರೆ ಮತ್ತು ಸಲಾಕೆಗಳಿಂದ ಬ್ಯಾಂಕ್‍ನ ಹಿಂಬದಿಯ ಗೋಡೆಯನ್ನು ಹೊಡೆದು ಸ್ರ್ಟಾಂಗ್ ರೂಮ್‍ಗೆ ನುಗ್ಗುಲು ಪ್ರಯತ್ನಿಸಿದ್ದಾರೆ. ಬ್ಯಾಂಕಿನ ಒಳಗೆ ಪ್ರವೇಶ ಮಾಡಲಾಗದೆ ಬಂದ ದಾರಿಗೆ ಸುಂಕವಿಲ್ಲದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯನ್ನು ಸ್ಥಳೀಯರು ಬೆಳಗ್ಗೆ ಗಮನಿಸಿ ಅಚ್ಚರಿಗೆ ಒಳಗಾಗಿ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ್ದಾರೆ.

Also Read  ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ


ಬ್ಯಾಂಕಿನ ವ್ಯವಸ್ಥಾಪಕರ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ, ಬೆರಳಚ್ಚು ತಜ್ಞರು ಹಾಗೂ ಶ್ವಾನಪತ್ತೆ ದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಹಾರೆ ಹಾಗೂ ಬ್ಯಾಂಕ್ ಹಿಂಬದಿ ಮದ್ಯ ಸೇವಿಸಿ ಬಿಸಾಡಿದ್ದ ಮದ್ಯದ ಬಾಟಲಿಗಳು ಸೇರಿದಂತೆ ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ.


ದರೋಡೆಗೆ ವಿಫಲಯತ್ನ ಮಾಡಿದ್ದು, ಯಾವುದೇ ಹಣ ಮತ್ತು ಕಾಗದ ಪತ್ರಗಳಿಗೆ ತೊಂದರೆಯಾಗಿಲ್ಲ. ಹಣವನ್ನು ದೋಚಿಲ್ಲ ಎಲ್ಲವೂ ಸುರಕ್ಷಿತವಾಗಿದೆ. ಯಾರೂ ಅತಂಕ ಪಡುವ ಅಗತ್ಯ ಎಂದು ಬ್ಯಾಂಕ್ ಮ್ಯಾನೇಜರ್ ಲೀಲಾವತಿ ತಿಳಿಸಿದ್ದಾರೆ.

error: Content is protected !!
Scroll to Top