(ನ್ಯೂಸ್ ಕಡಬ) newskadaba.com ಕಡಬ, ಸೆ.13. ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿಬೈದೆತಿಯ ಪುತ್ತಳಿಯ ಸಮೀಪ ಕುಳಿತು ಅಶ್ಲೀಲವಾಗಿ ಫೊಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಡಬ ಪ್ರಖಂಡದ ವತಿಯಿಂದ ಬ್ರಹತ್ ಪ್ರತಿಭಟನೆ ಹಾಗೂ ರಸ್ತೆ ತಡೆಯು ಕಡಬದಲ್ಲಿ ನಡೆಯಿತು.
ಇತ್ತೀಚೆಗೆ ಈಶ್ವರ ಮಂಗಲದ ಹನೀಫ್ ಎಂಬಾತ ದೇಯಿಬೈದಿತಿಯ ನೆನಪಿಗೋಸ್ಕರ ಸರಕಾರದಿಂದ ನಿರ್ಮಿಸಲ್ಪಟ್ಟ ದೇಯಿಬೈದಿತಿ ಔಷಧಿ ವನದಲ್ಲಿ ಬೈದೆತಿಯ ಎದೆಯ ಭಾಗವನ್ನು ಮುಟ್ಟಿ ಅಶ್ಲೀಲ ರೀತಿಯಲ್ಲಿ ಫೋಟೊ ತೆಗೆದು ಸಾಮಾಹಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದನು.
ಈತ ತನ್ನ ವಿಕೃತ ಬುದ್ದಿ ತೋರಿಸಿ ಪೋಟೋ ತೆಗೆದಿದ್ದು, ಇದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನವಾಗಿದೆ. ಈ ಕ್ರತ್ಯವನ್ನು ಗಂಭೀರವಾಗಿ ಪರಿಗಣಿಸಿ ಮತೀಯ ಭಾವನೆಯನ್ನು ಕೆರಳಿಸಿದ ದುಷ್ಕರ್ಮಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.