ಬೆಳ್ತಂಗಡಿಯ ಪ್ರತಿಭಾನ್ವಿತ ವಿದ್ಯಾರ್ಥಿ ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ: ಜು.29., ಬೆಳ್ತಂಗಡಿಯ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ಮಂಗಳೂರಿನ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಪಂಬಾಜೆಯ ರಾಜಿತ್ ಶೆಟ್ಟಿ (22) ಎಂದು ಗುರುತಿಸಲಾಗಿದೆ.ಈ ಬಗ್ಗೆ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಬಂಟ ಗ್ರಾಮ ಸಮಿತಿ ಬಳಂಜ ಇದರ ಮಾಜಿ ಅಧ್ಯಕ್ಷರು ಮತ್ತು ಬೆಳ್ತಂಗಡಿ ತಾಲೂಕು ಬಂಟರ ಸಂಘದ ಮಾಜಿ ನಿರ್ದೇಶಕರಾದ ರಮಾನಾಥ ಶೆಟ್ಟಿ ಪಂಬಾಜೆ ಲೀಲಾಂಜಲಿ ದಂಪತಿಗಳ ಪುತ್ರ ರಾಜಿತ್ ಕಳೆದ ಒಂದು ವರ್ಷದಿಂದ ಮಂಗಳೂರಿನಲ್ಲಿ ಹೊಟೇಲ್ ಮಾನೆಜ್ಮೆಂಟ್ ಕೋರ್ಸ್ ಅಭ್ಯಸಿಸುತ್ತಿದ್ದ. ತನ್ನ ಕೋರ್ಸಿನ ನಿಮಿತ್ತ ಆತ ಮಂಗಳೂರಿನಲ್ಲಿ ರೂಮ್ ಒಂದರಲ್ಲಿ ನೆಲೆಸಿದ್ದು ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Also Read  ಕಡಬ: ಭೂಮಿಯನ್ನು ತಂಪೆರೆದ ಮೊದಲ‌ 'ವರ್ಷಧಾರೆ' ತಾಲೂಕಿನ ವಿವಿಧೆಡೆ ಮಳೆಯ ಸಿಂಚನ


ಪ್ರತಿಭಾನ್ವಿತ ಯುವಕನಾಗಿದ್ದ ಈತ ಕ್ರೀಡೆ , ನಿರೂಪಣೆ , ಡ್ಯಾನ್ಸ್ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದ್ದ. ಉತ್ತಮ ವಾಲಿಬಾಲ್ ಆಟಗಾರ ಕೂಡ ಆಗಿದ್ದ ಈತ ಬೆಳ್ತಂಗಡಿಯಲ್ಲಿ ಡಿಪ್ಲೋಮಾ ವ್ಯಾಸಂಗ ಮುಗಿಸಿದ್ದ.
ಕಳೆದ ಒಂದು ವರ್ಷದಿಂದ ಮಂಗಳೂರಿನಲ್ಲಿ ಹೊಟೇಲ್ ಮಾನೆಜ್ಮೆಂಟ್ ಕೋರ್ಸ್ ಅಭ್ಯಸಿಸುತ್ತಿದ್ದ ನಿಮಿತ್ತ ಮಂಗಳೂರಿನಲ್ಲಿ ರೂಮ್ ಒಂದರಲ್ಲಿ ನೆಲೆಸಿದ್ದ. ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

error: Content is protected !!
Scroll to Top