ಕುಕ್ಕೆ ಸುಬ್ರಹ್ಮಣ್ಯ : ಸಿದ್ದಗೊಳ್ಳುತ್ತಿದೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಜು.29:  ರಾಜ್ಯದ ಪ್ರಸಿದ್ಧ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ಸಿದ್ಧಗೊಳ್ತಿದೆ.

 

 

ಹೌದು, ಪ್ರಸಿದ್ಧ ಕುಕ್ಕೆ ದೇವಾಲಯಕ್ಕೆ ದೇಶ ವಿದೇಶಗಳಿಂದ ಭಕ್ತರ ಸಾಲು ಆಗಮಿಸುತ್ತದೆ. ಪುಣ್ಯ ಪವಿತ್ರ ದೇವಾಲಯಕ್ಕೆ ಆಗಮಿಸುವ ಭಕ್ತರನ್ನ ತಣಿಸಲು ಈಗಾಗಲೇ ದೇವಾಲಯದ ಸುತ್ತಮುತ್ತಲು ಉದ್ಯಾನವನಗಳಿವೆ. ಅದರ ಜೊತೆಗೆ ಮತ್ತೊಂದು ಮೈಲುಗಲ್ಲು ಎಂಬಂತೆ ಸರ್ಕಾರದ ಆದೇಶದಂತೆ, ಕುಮಾರಧಾರ ನದಿಯ ಬಳಿ ಇರುವ ವಿಶಾಲವಾದ ಸುಮಾರು 32 ಎಕರೆ ವ್ಯಾಪ್ತಿಯಲ್ಲಿ ಭಕ್ತರನ್ನ ಮತಷ್ಟು ಆಕರ್ಷಿಸಲು ಹಾಗೂ ಪರಿಸರ ಕುರಿತಾದ ಮಹತ್ವವನ್ನು ತಿಳಿಸಲು ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾವನವು ನಿರ್ಮಾಣಗೊಂಡಿದೆ. ಮುಖ್ಯವಾಗಿ ಈ ಉದ್ಯಾನವನದಲ್ಲಿ ಅನೇಕ ಜಾತಿಯ ಮರ ಗಿಡಗಳಿದ್ದು, ಪ್ರತಿಯೊಂದು ಮರ ಗಿಡಗಳು ತನ್ನದೆ ಆದಾ ವೈಶಿಷ್ಟ್ಯತೆಯನ್ನ ಹೊಂದಿದೆ. ಪ್ರವಾಸಿಗರ ಮನ ತಣಿಸುವ ಜೊತೆಗೆ ಉತ್ತಮ ವೃಕ್ಷಗಳ ಬಗೆಗಿನ ಮಹತ್ವವನ್ನು ತಿಳಿಸುತ್ತದೆ.

Also Read  ಪರಾರಿಯಾಗಿದ್ದ ನಮೀಬಿಯಾ ಹೆಣ್ಣು ಚಿರತೆಯ ಜಾಡು ಪತ್ತೆ !

 

 

error: Content is protected !!
Scroll to Top