(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು.29: ಧರ್ಮಸ್ಥಳ ಗ್ರಾಮ ಕನ್ಯಾಡಿ-2 ರಾಮಮಂದಿರ ಸಮೀಪ ಲಾರಿಯಲ್ಲಿ ಹಿಂಸಾತ್ಮಕವಾಗಿ ಗೋ ಸಾಗಟ ನಡೆಸುತ್ತಿದ್ದ ತಂಡವನ್ನು ಮಂಗಳವಾರ ರಾತ್ರಿ ಭಜರಂಗದಳ ಕಾರ್ಯಕರ್ತರು ತಡೆದು ಲಾರಿ ಹಾಗೂ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿ ಜಾನುವಾರುಗಳನ್ನು ರಕ್ಷಿಸಿರುವ ಘಟನೆ ನಡೆದಿದೆ.
ಆರೋಪಿಗಳಾದ ಅಂಡಿಂಜೆ ಗ್ರಾಮದ ಅಬ್ದುಲ್ ಸಲಾಂ ಜಿ.(30), ಸಾವ್ಯ ಗ್ರಾಮದ ನೆಲ್ಲಿಗುಡ್ಡೆ ಮನೆ ಎಂ.ಅಕ್ಬರ್ (26) ಸಾವ್ಯ ಗ್ರಾಮದ ದರ್ಖಾಸು ಮನೆ ಸಂಜೀವ ಪೂಜಾರಿ (41) ಬಂಧಿತ ಆರೋಪಿಗಳಾಗಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಅಡಿ ದೂರು ದಾಖಲು ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪವನ ನಾಯಕ ಅವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, 8 ಹಸುಗಳು ಮತ್ತು 1 ಹೋರಿ ಸೇರಿ ಒಟ್ಟು 09 ಜಾನುವಾರು ಹಾಗೂ ಕೆ.ಎ.21 ಬಿ.8589 ನಂಬರಿನ ಲಾರಿ ಸೇರಿ ಒಟ್ಟು ಮೌಲ್ಯ 8,90,000 ಮೌಲ್ಯದ ಸೊತ್ತು ವಶ ವಶಕ್ಕೆ ಪಡೆದುಕೊಂಡಿದ್ದಾರೆ.